ನವದೆಹಲಿ: ಅಶ್ಲೀಲ ಹಾಗೂ ಆಕ್ಷೇಪಾರ್ಹ ವಿಷಯಗಳನ್ನು ಬಿತ್ತರ ಮಾಡದಂತೆ ಎಫ್‌ಎಂ ರೇಡಿಯೊ ವಾಹಿನಿಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ದೇಶನ ನೀಡಿದೆ.
ನವದೆಹಲಿ: ಅಶ್ಲೀಲ ಹಾಗೂ ಆಕ್ಷೇಪಾರ್ಹ ವಿಷಯಗಳನ್ನು ಬಿತ್ತರ ಮಾಡದಂತೆ ಎಫ್‌ಎಂ ರೇಡಿಯೊ ವಾಹಿನಿಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ದೇಶನ ನೀಡಿದೆ.
ಇಂಥ ವಿಷಯಗಳನ್ನು ಬಿತ್ತರಿಸುವುದು ಪರವಾನಗಿ ಒಪ್ಪಂದದ (ಜಿಒಪಿಎ) ಉಲ್ಲಂಘನೆಯಾಗುವುದು.
'ಕೆಲ ಎಫ್‌ಎಂ ರೇಡಿಯೊ ವಾಹಿನಿಗಳು ಅಶ್ಲೀಲ ಹಾಗೂ ಆಕ್ಷೇಪಾರ್ಹ ವಿಷಯಗಳನ್ನು ಆಗಾಗ್ಗೆ ಪ್ರಸಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ರೇಡಿಯೊ ಜಾಕಿಗಳ ಪೈಕಿ ಕೆಲವರು ಬಳಸುವ ಭಾಷೆ ಆಕ್ರಮಣಕಾರಿ, ಅಸಭ್ಯ ಅಥವಾ ದ್ವಂದ್ವಾರ್ಥದಿಂದ ಕೂಡಿರುತ್ತದೆ. ಅವಹೇಳನಕಾರಿ ಹಾಗೂ ಕೀಳು ಅಭಿರುಚಿಯ ಮಾತುಗಳನ್ನೂ ಬಳಸುತ್ತಿರುವುದು ಕಂಡುಬಂದಿದೆ' ಎಂದು ಸಚಿವಾಲಯ ಇತ್ತೀಚೆಗೆ ಹೇಳಿತ್ತು.