ತಿರುವನಂತಪುರ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಅಂತಿಮ ಹಂತಕ್ಕೆ ತಲುಪಿದ್ದು, ಐದು ಕ್ಷೇತ್ರಗಳಲ್ಲಿ ಭಾರೀ ಸೋಲು ಕಂಡಿರುವ ಕಾಂಗ್ರೆಸ್ ಪಕ್ಷವನ್ನು ವ್ಯಂಗ್ಯವಾಡಿದ್ದಾರೆ ಶಿಕ್ಷಣ ಸಚಿವ ವಿ.ಶಿವಂ ಕುಟ್ಟಿ.
ಅವರು ಫೇಸ್ ಬುಕ್ ಪೋಸ್ಟ್ ಮೂಲಕ ಅವರು ವ್ಯಂಗ್ಯವಾಡಿದ್ದಾರೆ .
ಅವರ ಫೇಸ್‌ಬುಕ್ ಪೋಸ್ಟ್ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಕಾರ್ಟೂನ್‌ಗಳೊಂದಿಗೆ ಟ್ರೋಲ್‌ಗಳನ್ನು ಹಂಚಿಕೊಂಡಿರುವರು. ಟ್ರೋಲ್‌ಗಳ ಮೂಲಕ ಕಾಂಗ್ರೆಸ್ ಕುಟುಂಬದ ಪಕ್ಷ ಎಂದು ವಾದಿಸಿದ್ದಾರೆ.
ಅದರ ಒಡಕು, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಹಾಗೂ ಸ್ವಜನಪಕ್ಷಪಾತಕ್ಕೆ ಕಾಂಗ್ರೆಸ್ ಮತ್ತು ಉಳಿದವರೇ ಹೊಣೆ ಹೊರಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.