ಕೈವ್/ನವದೆಹಲಿ: ಉಕ್ರೇನ್ ನಲ್ಲಿ ರಷ್ಯಾ ಸೇನೆ ದಾಳಿಯನ್ನು ತೀವ್ರಗೊಳಿಸಿದ್ದು ನಿನ್ನೆ ಕರ್ನಾಟಕ ಮೂಲದ ನವೀನ್ ಮೃತಪಟ್ಟಿದ್ದರು. ಇದೀಗ ಮತ್ತೊರ್ವ ಭಾರತೀಯ ಮೃತಪಟ್ಟಿದ್ದಾನೆ.
ಪಂಜಾಬ್ ನ ಬರ್ನಾಲ್ ಗ್ರಾಮದ ಚಂದನ್ ಜಿಂದಾಲ್ ಯುದ್ಧ ಭೂಮಿಯಲ್ಲಿ ಮೃತಪಟ್ಟಿದ್ದಾರೆ.
ರಷ್ಯಾ ದಾಳಿ ವೇಳೆ ಚಂದನ್ ಜಿಂದಾಲ್ ಗೆ ಬ್ರೇನ್ ಸ್ಟ್ರೋಕ್ ಆಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಂದನ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಏತನ್ಮಧ್ಯೆ, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ಎಲ್ಲಾ ನಾಗರಿಕರನ್ನು ತಕ್ಷಣವೇ ಖಾರ್ಕಿವ್‌ನಿಂದ ತೊರೆಯಲು ಮತ್ತು ಪೆಸೊಚಿನ್, ಬಾಬಾಯೆ ಮತ್ತು ಬೆಜ್ಲ್ಯುಡೋವ್ಕಾಗೆ ತಲುಪುವಂತೆ ತುರ್ತು ಸಲಹೆಯನ್ನು ನೀಡಿದೆ.