ಕಾಸರಗೋಡು: ವಿಶ್ವ ಗ್ರಾಹಕರ ದಿನವನ್ನು ರಾಜ್ಯಮಟ್ಟದಲ್ಲಿ ಮಾ. 15ರಂದು ಆಚರಿಸುವ ಹಿನ್ನೆಲೆಯಲ್ಲಿ ಜಿಲ್ಲಾ ನಾಗರಿಕ ಪೂರೈಕೆ ಇಲಾಖೆ ಆಶ್ರಯದಲ್ಲಿ ಇಲಾಖೆ ವತಿಯಿಂದ ಉಪನ್ಯಾಸ ಕಾರ್ಯಾಗಾರ ನಡೆಯಲಿರುವುದು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ನಗರಸಭಾ ಉಪಾಧ್ಯಕ್ಷೆ ಶಂಸಿದಾ ಫಿರೋಸ್ ಉದ್ಘಾಟಿಸುವರು. ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ ಕೆ.ಪಿ ಅನಿಲ್‍ಕುಮಾರ್ ಅಧ್ಯಕ್ಷತೆ ವಹಿಸುವರು.