ಕಾಸರಗೋಡು: ಜಿಲ್ಲಾ ಸಾಮಾಜಿಕ ನ್ಯಾಯ ಕಛೇರಿ ಮತ್ತು ನಿರ್ವಹಣಾ ನ್ಯಾಯಮಂಡಳಿ, ಕಾಂಞಂಗಾಡ್ ಜಂಟಿಯಾಗಿ ಪಾಲಕರು ಮತ್ತು ಹಿರಿಯ ನಾಗರಿಕರ ರಕ್ಷಣೆ ಮತ್ತು ಕಲ್ಯಾಣ ಕಾಯಿದೆ, 2007 ಕುರಿತು ಅಧಿಕಾರಿಗಳಿಗೆ ಜಾಗೃತಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಹೊಸದುರ್ಗ ಮಿನಿ ಸಿವಿಲ್ ಸ್ಟೇಷನ್ ಮುಖ್ಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉಪ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ ಉದ್ಘಾಟಿಸಿದರು. ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಸಿ.ಕೆ.ಶೀಬಾ ಮುಮ್ತಾಜ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಉಪ ತಹಸೀಲ್ದಾರ್ ಎಂ.ಎಸ್.ಲಿಜಿನ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಜಿಲ್ಲಾ ಆಸ್ಪತ್ರೆಯ ಮನೋವೈದ್ಯ ಡಾ.ಕೆ.ಎಸ್. ಸನ್ನಿ ಮ್ಯಾಥ್ಯೂ, ಸಮಾಜ ಕಲ್ಯಾಣ ಯೋಜನೆ ಕುರಿತು ಜಿಲ್ಲಾ ಸಾಮಾಜಿಕ ನ್ಯಾಯ ಕಛೇರಿಯ ಹಿರಿಯ ಗುಮಾಸ್ತರಾದ ಸೀಮಾ ವಿಜಯನ್ ಮತ್ತು ಪಿ.ಕೆ.ರಘುನಾಥನ್ ತರಗತಿ ನೀಡಿದರು. ಜಿಲ್ಲಾ ಸಾಮಾಜಿಕ ನ್ಯಾಯ ಕಛೇರಿಯ ಹಿರಿಯ ಅಧೀಕ್ಷಕ ಜೋಯ್ಸ್ ಸ್ಟೀಫನ್ ಸ್ವಾಗತಿಸಿ, ಆರ್.ಡಿ.ಕಚೇರಿ ಗುಮಾಸ್ತ ಸತೀಶನ ಮಡಿಕ್ಕಾಯಿ ವಂದಿಸಿದರು.