ಮುಳ್ಳೇರಿಯಾ: ಸಮುದಾಯದ ಏಳ್ಗೆಗಾಗಿ ತಳಮಟ್ಟದಲ್ಲಿ ಸಂಘಟನೆಯು ಬಲಗೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಅಖಿಲ ಕೇರಳ ಯಾದವ ಸಭಾ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಬಾಬು ಮಣಿಯೂರು ಹೇಳಿದರು.
ಅವರು ಅಖಿಲ ಕೇರಳ ಯಾದವ ಸಭಾ ಕಾಸರಗೋಡು ತಾಲೂಕು ಮಹಾಸಭೆಯನ್ನು ಮುಳ್ಳೇರಿಯಾದ ಸಂಘದ ಸಭಾಂಗಣದಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಮಹಾಸಭೆಯಲ್ಲಿ ತಾಲೂಕು ಅಧ್ಯಕ್ಷ ಎಂ.ನಾರಾಯಣ ನೀರ್ಚಾಲು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ನಾರಾಯಣ ಮಣಿಯಾಣಿ ಬದಿಯಡ್ಕ ವರದಿಯನ್ನೂ, ಕೋಶಾಧಿಕಾರಿ ರಾಧಾಕೃಷ್ಣ ಅಣಂಗೂರು ಲೆಕ್ಕಪತ್ರವನ್ನು ಮಂಡಿಸಿದರು.
ಮಹಾಸಭೆಯಲ್ಲಿ ಅಖಿಲ ಕೇರಳ ಯಾದವ ಸಭಾ ರಾಜ್ಯ ಸಮಿತಿ ಉಪಾಧ್ಯಕ್ಷ ಉದಯ ಕುಮಾರ್ ಬದಿಯಡ್ಕ, ಕಾರ್ಯದರ್ಶಿ ಕೆ.ಎಂ. ದಾಮೋದರ ಕರ್ಮಂತೋಡಿ ಮಾತನಾಡಿದರು.
ವೇದಿಕೆಯಲ್ಲಿ ತಾಲೂಕು ಸಮಿತಿ ಉಪಾಧ್ಯಕ್ಷ ಸೀತಾರಾಮ ಕೂಟ್ಲುಂಗಾಲ್, ರಾಜಕುಮಾರ್ ಎಂ.ಎನ್., ರಾಜ್ಯ ಸಮಿತಿ ಸದಸ್ಯ ಶಿವಪ್ರಸಾದ್ ಕಡಾರ್, ರಾಜೇಶ್ ಎಲ್ಲಂಗಳ ಮಧೂರು, ಯುವ ವಿಭಾಗ ಅಧ್ಯಕ್ಷ ಕೆ.ಗಂಗಾಧರ್ ಯಾದವ್ ಉಪಸ್ಥಿತರಿದ್ದರು. ಆರಂಭದಲ್ಲಿ ನಾರಾಯಣ ಮಣಿಯಾಣಿ ಬದಿಯಡ್ಕ ಸ್ವಾಗತಿಸಿ, ತಾಲೂಕು ಸಮಿತಿ ಕಾರ್ಯದರ್ಶಿ ಕರುಣಾಕರನ್ ಪಿ. ವಂದಿಸಿದರು.
ನೂತನ ಪದಾಧಿಕಾರಿಗಳು:
ನೂತನ ಅಧ್ಯಕ್ಷ- ಎಂ.ನಾರಾಯಣ ನೀರ್ಚಾಲು, ಉಪಾಧ್ಯಕ್ಷ- ಸೀತಾರಾಮ ಕೂಟ್ಲುಂಗಲ್ಲು, ರೋಹಿಣಿ ಗಾಡಿಗುಡ್ಜೆ, ಪ್ರಧಾನ ಕಾರ್ಯದರ್ಶಿ- ನಾರಾಯಣ ಮಣಿಯಾಣಿ ಬದಿಯಡ್ಕ, ಜೊತೆ ಕಾರ್ಯದರ್ಶಿ- ಅಪ್ಪಕುಂಞÂ, ಕೋಶಾಧಿಕಾರಿ-ರಾಧಾಕೃಷ್ಣ ಅಣಂಗೂರು.
ಕಾರ್ಯಕಾರಿ ಸಮಿತಿ ಸದಸ್ಯರು- ಗೋಪಾಲ ಕೇರ, ದಾಮೋದರ ಕರ್ಮಂತೋಡಿ, ಉದಯ ಕುಮಾರ್ ಬದಿಯಡ್ಕ, ಮನು ಕೋಣಲ, ಉದಯ ಕೊಣಲ, ಚಂದ್ರಶೇಶರ, ಅಖಿಲ್, ಕೆ. ಗಂಗಾಧರ್ ಯಾದವ್, ಅಂಬುಜಾಕ್ಷನ್, ಗಣೇಶ್ ನೀರ್ಚಾಲು, ಬಾಲಚಂದ್ರ ಮಧೂರು, ಕೃಷ್ಣ ಮಧೂರು, ಸುರೇಶ್ ಕೂಡ್ಲು, ಉದಯನ್ ಕೋಳಿಯಡ್ಕ ಹಾಗೂ ಕರುಣಾಕರ ಪಂಜರಿಕೆ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಅಖಿಲ ಕೇರಳ ಯಾದವ ಸಭಾ ಜಿಲ್ಲಾ ಕಾರ್ಯದರ್ಶಿ ಬಾಬು ಮಣಿಯೂರು ಭಾಗವಹಿಸಿದರು.