ಕುಂಬಳೆ: ಎಲ್ಲ ರೋಗಿಗಳಿಗೆ ಉಚಿತ ಚಿಕಿತ್ಸೆ ಎಂಬ ಚಿಂತನೆಯೊಂದಿಗೆ ಕೆ.ಕೆ.ಅಬ್ದುಲ್ ರೆಹಮಾನ್ ಸ್ಮಾರಕ ಆರೋಗ್ಯ ಕೇಂದ್ರ ಕಳತ್ತೂರು ಚೆಕ್ ಪೋೀಸ್ಟ್ ಪರಿಸರದÀಲ್ಲಿ ಭಾನುವಾರದಿಂದ ಕಾರ್ಯಾರಂಭ ಮಾಡಿದೆ.
ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿದರು. ಡಾ. ಐ.ಕೆ. ಮೊಯ್ದೀನ್ ಕುಂಞÂ್ಞ ಅವರಂತೆ ಪ್ರತಿ ಪ್ರದೇಶದಿಂದ ವೈದ್ಯರು ವಾರಕ್ಕೆ ಎರಡು ಗಂಟೆಯಾದರೂ ಸ್ಥಳೀಯರಿಗಾಗಿ ಕೆಲಸ ಮಾಡಿದರೆ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆಯಾಗುತ್ತದೆ ಎಂದರು.
ಸೈಯದ್ ಎನ್.ಕೆ.ಎಂ.ಶರಫುದ್ದೀನ್ ತಂಙಳ್ ಅಲ್ ಹಾದಿ ಕುನ್ನುಂಗೈ ಹಾಗೂ ಸೈಯದ್ ಯಾಹಿಯಾ ಬುಖಾರಿ ತಂಙಳ್ ಮಡವೂರು ಕೋಟೆ ಪ್ರಾರ್ಥನೆ ನಡೆಸಿದರು. ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸುಫ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ಸದಸ್ಯೆ ಜಮೀಲಾ ಸಿದ್ದೀಕ್ ದಂಡೆಗೋಳಿ, ಕಾಸರಗೋಡು ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಮಂಜುನಾಥ ಆಳ್ವ ಮಡ್ವ, ಅಝೀಝ್ ಕಳತ್ತೂರು, ಖಯ್ಯೂಮ್ ಮಾನ್ಯ ಉಪಸ್ಥಿತರಿದ್ದರು. ಡಾ. ಮೊಯ್ದೀನ್ ಕುಂಞÂ್ಞ ಐ.ಕೆ. ಮಾತನಾಡಿದರು. ಅಶ್ರಫ್ ಕೊಡ್ಯಮೆ ಸ್ವಾಗತಿಸಿ, ವಂದಿಸಿದರು.