ಕಾಸರಗೋಡು: ಸ್ಥಳೀಯ ಸಂಸ್ಥೆಗಳ ಜಂಟಿ ಸಹಭಾಗಿತ್ವದಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕಾರಡ್ಕ ಬ್ಲಾಕ್ ವನ್ಯಜೀವಿಗಳ ಹಾವಳಿ ನಿಯಂತ್ರಿಸಲು ನೂತನ ಸೌರ ಬೇಲಿ ಯೋಜನೆ ಅನುಷ್ಠಾನಗೊಳಿಸುತ್ತಿದೆ ಎಂದು ಶಾಸಕ ಸಿ.ಎಚ್ ಕುಂಞಂಬು ಹೇಳಿದರು. ವನ್ಯಜೀವಿಗಳ ನಿಯಂತ್ರಣಕ್ಕೆ ಇತರೆ ಜಿಲ್ಲೆಗಳಿಗೂ ಈ ಯೋಜನೆ ಮಾದರಿಯಾಗಬೇಕು ಎಂದು ತಿಳಿಸಿದರು. 29 ಕಿ.ಮೀ ಉದ್ದದ ತೂಗು ಬೇಲಿಯ ವೆಚ್ಚ `3.33 ಕೋಟಿ.ರೂ. ಆಗಿದ್ದು, ಮೊದಲ ಹಂತವು ಒಂದು ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಅಡೂರು ಪುಲಿಪರಂಬು ಎಂಬಲ್ಲಿ ನಿನ್ನೆ ಉದ್ದೇಶಿತ ಸೌರಬೇಲಿ ನಿರ್ಮಾಣ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಅರಣ್ಯ ಇಲಾಖೆ ಡಿಎಫ್ ಒ ಪಿ.ಕೆ.ಧನೇಶ್ ಕುಮಾರ್ ವರದಿ ಮಂಡಿಸಿದರು.
ಬೇಡಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ. ಧನ್ಯ, ಮುಳಿಯಾರ್ ಗ್ರಾ.ಪಂ ಅಧ್ಯಕ್ಷೆ ಪಿ.ವಿ. ಮಿನಿ, ಕಾರಡ್ಕ ಗ್ರಾ.ಪಂ.ಉಪಾಧ್ಯಕ್ಷೆ ಎಂ ಜನನಿ, ಕುತ್ತಿಕೋಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮುರಳಿ ಪಯ್ಯಂಗಾನಂ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್. ಎನ್. ಸರಿತಾ, ರೇಂಜ್ ಅಧಿಕಾರಿ ಸೊಲೊಮನ್ ಥಾಮಸ್ ಜಾರ್ಜ್, ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಕೆ. ರಮಣಿ, ಬ್ಲಾಕ್ ಪಂಚಾಯಿತಿ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಕೆ. ನಾರಾಯಣನ್, ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷೆ ಸ್ಮಿತಾ ಪ್ರಿಯರಂಜನ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ್ಷೆ ಪಿ. ಸವಿತಾ ಮತ್ತಿತರರು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು
ಅರಣ್ಯಾಧಿಕಾರಿ ಆರ್ ಬಾಬು ಸ್ವಾಗತಿಸಿ ವಂದಿಸಿದರು. ಪೋಲೀಸ್ ಕನ್‍ಸ್ಟ್ರಕ್ಷನ್ ಕಾಪೆರ್Çರೇಷನ್ ನಿರ್ಮಾಣದ ಹೊಣೆ ಹೊತ್ತಿದೆ. ಸೌರ ಬೇಲಿ ನಿರ್ಮಾಣ ಗೋಡೆಯ ಉದ್ದಕ್ಕೂ ವಾಚ್‍ಟವರ್‍ಗಳು, ವಾಚ್ ಸ್ಟೇಷನ್ ಮತ್ತು ಲೈಟಿಂಗ್ ಅನ್ನು ಸಹ ಸ್ಥಾಪಿಸಲಾಗುವುದು.
ಮುಳಿಯಾರ್, ಕಾರಡ್ಕ, ಬೇಡಗ, ಕುತ್ತಿಕೋಲ್ ಮತ್ತು ದೇಲಂಪಾಡಿ ಗ್ರಾಮ ಪಂಚಾಯತ್‍ಗಳು ಸೌರ ಬೇಲಿ ಯೋಜನೆಯ ಫಲಾನುಭವಿಗಳು. ಕಳೆದ ಮೂರು ವರ್ಷಗಳಲ್ಲಿ ಬ್ಲಾಕ್ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳಿಂದ 38,8436950 ರೂಪಾಯಿ ಹಾನಿ ಎಸಗಿವೆ. ಇದಕ್ಕೆ ಸೌರ ಬೇಲಿ ಯೋಜನೆ ಶಾಶ್ವತ ಪರಿಹಾರವಾಗಲಿದೆ ಎಂದು ಆಶೀಸಲಾಗಿದೆ.