ನವದೆಹಲಿ: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(ಬಿಎಸ್‌ಎನ್‌ಎಲ್) ನಿಂದ ಬಂಡವಾಳ ಹಿಂಪಡೆಯುವ ಯಾವುದೇ ಯೋಜನೆ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸಂಸತ್ತಿಗೆ ತಿಳಿಸಿದೆ.
2020ರ ಆರಂಭದಲ್ಲಿ ಸ್ವಯಂ ನಿವೃತ್ತಿ ಯೋಜನೆ(ವಿಆರ್‌ಎಸ್) ಜಾರಿಯಿಂದಾಗಿ ಃSಓಐ ಒದಗಿಸುವ ಸೇವೆಗಳಲ್ಲಿ ಯಾವುದೇ ವಿಳಂಬ ಅಥವಾ ಕೊರತೆಯಾಗಿಲ್ಲ ಎಂದು ಸಂವಹನ ಖಾತೆ ರಾಜ್ಯ ಸಚಿವ ದೇವುಸಿನ್ಹ್ ಚೌಹಾಣ್ ಅವರು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಾರ್ಪೊರೇಷನ್‌ನ ಕಾರ್ಯಾಚರಣೆಗೆ ಪ್ರಸ್ತುತ ಇರುವ ಉದ್ಯೋಗಿಗಳ ಸಂಖ್ಯೆ ಸಾಕಾಗುತ್ತದೆ ಎಂದು ಚೌಹಾಣ್ ಅವರು ಹೇಳಿದ್ದಾರೆ.
ಬಿಎಸ್‌ಎನ್‌ಎಲ್‌ನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಚೌಹಾಣ್, “ಬಿಎಸ್‌ಎನ್‌ಎಲ್‌ನಿಂದ ಬಂಡವಾಳ ಹಿಂಪಡೆಯುವ ಯಾವುದೇ ಯೋಜನೆಯು ಪರಿಗಣನೆಯಲ್ಲಿಲ್ಲ ಎಂದಿದ್ದಾರೆ.
ಮಾರ್ಚ್ 31, 2021 ರ ವರೆಗೆ ಕಟ್ಟಡಗಳು, ಭೂಮಿಗಳು, ಟವರ್‌ಗಳು, ಟೆಲಿಕಾಂ ಉಪಕರಣಗಳು ಮತ್ತು ಟೆಲಿಕಾಂ ಅಲ್ಲದ ಉಪಕರಣಗಳು ಸೇರಿದಂತೆ ಸ್ಥಿರ ಆಸ್ತಿಗಳ ಮೌಲ್ಯವು ಲೆಕ್ಕಪರಿಶೋಧಕರ ಪ್ರಕಾರ 89,878 ಕೋಟಿ ರೂ.(ಒಟ್ಟು ನೆಟ್‌ಬ್ಲಾಕ್) ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.