ಬೇಸಿಗೆಯ ಝಳ-ಝಳ ಶುರುವಾಗಿದೆ... ಮನೆಯಿಂದ ಸ್ವಲ್ಪ ಹೊತ್ತು ಹೊರಗಡೆ ಹೋದರೆ ಈ ಬಿರು ಬಿಸಿಲಿನಿಂದಾಗಿ ಬೇಗನೆ ಸುಸ್ತಾಗಿ ಬಿಡುತ್ತದೆ. ಮನೆಯೊಳಗಡೆ ಬಂದು ಸುಧಾರಿಸೋಣ ಎಂದರೆ ಮನೆಯೊಳಗಡೆ ಕೂಡ ಸೆಕೆ ಅನಿಸುವುದು.
ಮನೆಯಲ್ಲಿ ಎಸಿ ಇದ್ದರೆ ಒಕೆ, ಇಲ್ಲದಿದ್ದರೆ ಫ್ಯಾನ್ ಗಾಳಿ ತಾಗುವುದೇ ಇಲ್ಲ. ತುಂಬಾ ಸೆಕೆಯಿದ್ದರೆ ರಾತ್ರಿ ಹೊತ್ತಿನಲ್ಲಿ ಕಣ್ಣಿಗೆ ನಿದ್ದೆ ಕೂಡ ಹತ್ತುವುದಿಲ್ಲ. ನಾವಿಲ್ಲ ಬೇಸಿಗೆಯಲ್ಲಿ ತಂಪಾಗಿರಲು ಎಸಿ ರೂಂನಲ್ಲಿ ಇರುವಂತೆ ಕೆಲವೊಂದು ಟ್ರಿಕ್ಸ್ ನೀಡಿದ್ದೇವೆ. ಈ ಟ್ರಿಕ್ಸ್ ಪಾಲಿಸಿದರೂ ಎಸಿ ಇಲ್ಲದೆಯೂ ಮನೆಯನ್ನು ತಂಪಾಗಿ ಇಡಬಹುದು ನೋಡಿ:
1. ಒಂದು ಬೌಲ್ ಐಸ್ ಮತ್ತು ಫ್ಯಾನ್ ನಿಮ್ಮ ಮನೆಯಲ್ಲಿ ಒಂದು ಟೇಬಲ್ ಫ್ಯಾನ್ ಇದ್ದರೆ ಸಾಕು, ಈ ಪ್ಲ್ಯಾನ್ ವರ್ಕೌಟ್ ಆಗುತ್ತೆ. ಒಂದು ಸ್ಟೀಲ್ ಬೌಲ್‌ನಲ್ಲಿ ಐಸ್‌ಕ್ಯೂಬ್ ಹಾಕಿ ಫ್ಯಾನ್ ಮುಂದೆ ಇಡಿ, ಆಗ ಐಸ್ ಕರಗಿದರೂ ತಣ್ಣನೆಯ ನೀರು ಇರುತ್ತೆ, ರೂಂ ತಂಪಾಗಿರುತ್ತೆ.
2. ಮನೆಯ ಕಿಟಕಿ ತೆಗೆಯುವ ಸಮಯ ಹೆಚ್ಚಿನವರಿಗೆ ಈ ಟ್ರಿಕ್ಸ್ ಗೊತ್ತಿಲ್ಲ... ನಿಮ್ಮ ಮನೆ ಕೂಲ್ ಆಗಿರಲು ಕಿಟಕಿ ತೆಗೆಯಲು ಬೆಸ್ಟ್ ಟೈಮ್ ಬೆಳಗ್ಗೆ 5 ಗಂಟೆಯಿಂದ 8 ಗಂಟೆಯವರೆಗೆ ಹಾಗೂ ರಾತ್ರಿ 7 ಗಂಟೆಯಿಂ 10 ಗಂಟೆಯವರೆಗೆ. ಈ ಸಮಯದಲ್ಲಿ ಮನೆ ಕಿಟಕಿ ತೆರೆದಿಡಿ. ಮನೆ ತಂಪಾಗುವುದು.
3. ಮನೆಯೊಳಗಡೆ ಗಾಳಿ ಆಡುವಂತೆ ಇರಲಿ ಮನೆಯೊಳಗಡೆ ವಸ್ತುಗಳೆನ್ನೆಲ್ಲಾ ತುಂಬಿ ಇಡಬೇಡಿ. ಮನೆ ಖಾಲಿ-ಖಾಲಿಯಾಗಿದ್ದರೆ ಗಾಳಿಯಾಡುತ್ತೆ ತುಂಬಾ ಸೆಕೆಯಾಗಲ್ಲ.
4. ಅವಶ್ಯಕತೆಯಿಲ್ಲದಿದ್ದಾಗ ಲೈಟ್ ಆಫ್ ಮಾಡಿ ಲೈಟ್ ಉರಿಸಿದರೆ ಮತ್ತಷ್ಟು ಸೆಕೆಯಾಗುವುದು. ತುಂಬಾ ಲೈಟ್ಸ್ ಹಾಕಬೇಡಿ, ಹಗಲಿನಲ್ಲಿ ಸೂರ್ಯನ ಬೆಳಕು ಒಳಗಡೆ ಬೀಳುವಂತೆ ಇರಲಿ.
5. ಅಕ್ಕಿಯಿಂದ ದಿಂಬು ಮಾಡಿ ಬೆಸಿಗೆಯಲ್ಲಿ ಅಕ್ಕಿಯಿಂದ ಆಡಿದ ದಿಂಬು ಬಳಸಿ. ಇದರಿಂದ ಮಲಗಿದಾಗ ಚೆನ್ನಾಗಿ ನಿದ್ದೆ ಮಾಡಿ, ಅಲ್ಲದೆ ಕುತ್ತಿಗೆ ಹುಳುಕಿದ್ದರೆ, ಕುತ್ತಿಗೆ ನೀವು, ಮೈಕೈ ನೋವು ಇದ್ದರೆ ಎಲ್ಲಾ ಸರಿ ಆಗುವುದು.
6. ಸುತ್ತ-ಮುತ್ತ ಗಿಡಗಳಿರಲಿ ಮನೆಯೊಳಗಡೆ ಕೂಡ ನೀವು ಹೂ ಗಿಡಗಳನ್ನು ಇಡಬಹುದು, ಮನೆ ಹೊರಗಡೆ ಹೂ ಗಿಡಗಳನ್ನು ಬಳಸಿ, ಸ್ವಲ್ಪ ಸ್ಥಳವಿದ್ದರೆ ಅಲ್ಲಿ ಮಾವಿನ ಮರ, ಹಲಸಿನ ಮರ ಇಂಥ ಮರಗಳನ್ನು ಬಳಸಿದರೆ ತುಂಬಾ ತಂಪಾಗಿರುತ್ತದೆ.
7. ಗಾಳಿಯಾಡುವ ಕರ್ಟನ್ ಬಳಸಿ ಮನೆಗೆ ಬಳಸುವ ಗಾಳಿಯಾಡುವಂತೆ ಇರಲಿ, ಬಿದಿರಿನ ಶೇಡ್ಸ್ ಬಳಸಿ. ಸಿಂಥೆಟಿಕ್ ಕರ್ಟನ್ ಬಳಸಬೇಡಿ. ಇನ್ನು ಕಿಟಕಿಗೆ ಸೊಳ್ಳೆ ಪರೆದೆ ಹಾಕಿಸಿ, ಆಗ ಕಿಟಕಿಯನ್ನು ತೆರೆದಿಡಬಹುದು, ಗಾಳಿಯಾಡುವುದು.
7.ಈಜಿಪ್ಟ್‌ನವರಂತೆ ನಿದ್ದೆ ಮಾಡಿ ತುಂಬಾ ಸೆಕೆಯಿದ್ದಾಗ ಈಜಿಪ್ಟ್‌ನರಂತೆ ನಿದ್ದೆ ಮಾಡಿ. ಅಂದರೆ ಒಂದು ಬೆಡ್‌ಶೀಟ್ ಒದ್ದೆ ಮಾಡಿ ಅದನ್ನು ಹಾಸಿ ಅದರ ಮೇಲೆ ಮಲಗಿ, ಫ್ಯಾನ್ ಗಾಳಿ ಕೂಡ ಬೀಸುತ್ತಿರುವಾಗ ತುಂಬಾ ತಂಪಾಗಿ ಹಾಯಾನಿಸುವುದು, ಒಳ್ಳೆಯ ನಿದ್ದೆಯೂ ಬರುವುದು. ಮೈಯನ್ನು ತಂಪಾಗಿಸುವ ಆಹಾರ ಸೇವಿಸಿ ಬೇಸಿಗೆಯಲ್ಲಿ ಫ್ರೂಟ್ ಸಲಾಡ್, ತಾಜಾ ಜ್ಯೂಸ್, ಸೌತೆಕಾಯಿ, ಕಲ್ಲಂಗಡಿ ಹಣ್ಣು ಹೀಗೆ ದೇಹವನ್ನು ತಂಪಾಗಿಸುವ ಆಹಾರ ಸೇವಿಸಿ. ಬಹು ಮುಖ್ಯವಾಗಿ ಸೀಸನಲ್ ಆಹಾರ ಸೇವಿಸಿ.