ತಿರುವನಂತಪುರ: ಎರಡು ರೂಪಾಯಿ ರಿಯಾಯಿತಿ ವಿದ್ಯಾರ್ಥಿಗಳಿಗೆ ಅವಮಾನ ಎಂಬ ಸಾರಿಗೆ ಸಚಿವ ಆಂಟನಿ ರಾಜು ಅವರ ಸಾರ್ವಜನಿಕ ಹೇಳಿಕೆಗೆ ಎಬಿವಿಪಿ ಸಹಿ ವಿದ್ಯಾರ್ಥಿ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದೆ. ಸಚಿವರು ತಮ್ಮ ಹೇಳಿಕೆ ಹಿಂಪಡೆದು ವಿದ್ಯಾರ್ಥಿ ಸಮುದಾಯದ ಕ್ಷಮೆ ಯಾಚಿಸಬೇಕು ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಶ್ರೀಹರಿ ಆಗ್ರಹಿಸಿದರು. ಬಸ್ ರಿಯಾಯಿತಿ ವಿದ್ಯಾರ್ಥಿಗಳ ಹಕ್ಕು ಎಂದಿರುವರು.
ಬಸ್ ಮಾಲಕರನ್ನು ತೃಪ್ತಿಪಡಿಸಲು ಬಾಯಿಗೆಬಂದ ಹೇಳಿಕೆಯನ್ನು ಸಚಿವರು ನೀಡಬಾರದು. ಅನೇಕ ಬಸ್ ಸಿಬ್ಬಂದಿ ವಿದ್ಯಾರ್ಥಿಗಳನ್ನು ಎರಡನೇ ದರ್ಜೆಯ ನಾಗರಿಕರಂತೆ ನೋಡುತ್ತಾರೆ. ಅನೇಕ ಖಾಸಗಿ ಬಸ್ ನಿರ್ವಾಹಕರು ತಮ್ಮ ಔದಾರ್ಯದ ಭಾಗವಾಗಿ ವಿದ್ಯಾರ್ಥಿಗಳನ್ನು ಬಸ್‍ಗೆ ಹÀತ್ತಿಸುತ್ತಾರೆನ್ನಲಾಗುತ್ತದೆ. ಖಾಸಗಿ ಬಸ್‍ಗಳಲ್ಲಿ ವಿದ್ಯಾರ್ಥಿಗಳ ಪ್ರಯಾಣ ಉಚಿತ ಪ್ರಯಾಣವಾದರೂ ಅದು ಬಸ್ ಸಿಬ್ಬಂದಿಗಳ ಉದಾರತೆಯಲ್ಲ. ಇದು ವಿದ್ಯಾರ್ಥಿಗಳ ಹಕ್ಕು.
ಖಾಸಗಿ ಬಸ್ ನಿರ್ವಾಹಕರು ಆಸನವಿದ್ದರೂ ವಿದ್ಯಾರ್ಥಿಗಳಿಗೆ ಕುಳಿತರಲು ಅನುಮತಿಸುತ್ತಿಲ್ಲ. ಬಸ್ ನಿಲ್ದಾಣಗಳಲ್ಲಿ ವಿದ್ಯಾರ್ಥಿಗಳು ಸುಡುವ ಬಿಸಿಲಿನಲ್ಲಿ ಸರದಿಯಲ್ಲಿ ಬಸ್ ಗಳಿಗಾಗಿ ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ. ಇದೆಲ್ಲದರಿಂದ ಬಳಲುತ್ತಿರುವ ವಿದ್ಯಾರ್ಥಿ ಸಮುದಾಯಕ್ಕೆ ಈಗ ಸಾರಿಗೆ ಸಚಿವರ ಹೇಳಿಕೆ ಅವಮಾನ ಮಾಡಿದಂತಾಗಿದೆ ಎಂದು ಶ್ರೀಹರಿ ಹೇಳಿದ್ದಾರೆ.
ಸಂಪೂರ್ಣ ಬೇಜವಾಬ್ದಾರಿ ಹೇಳಿಕೆಯನ್ನು ಹಿಂಪಡೆದು ವಿದ್ಯಾರ್ಥಿ ಸಮುದಾಯದ ಕ್ಷಮೆ ಯಾಚಿಸಲು ಸಚಿವರು ಸಿದ್ಧರಾಗಬೇಕು. ಸಚಿವರು ದುರಹಂಕಾರದ ಧೋರಣೆ ಅನುಸರಿಸಿದರೆ ಎಬಿವಿಪಿಯವರು ಸಾರಿಗೆ ಸಚಿವರ ದಾರಿಗೆ ಅಡ್ಡಿಪಡಿಸುತ್ತಾರೆ ಎಂದರು.
ಎಬಿವಿಪಿ ಸಹಿತ ಎಸ್ ಎಫ್ ಐ ಕೂಡಾ ಸಚಿವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದೆ.