ಪಾಲಕ್ಕಾಡ್: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಜೀವ ಬೆದರಿಕೆ ಹಾಕಿದ್ದ ಯುವಕನನ್ನು ಪೋಲೀಸರು ಬಂಧಿಸಿದ್ದಾರೆ. ಪಾಲಕ್ಕಾಡ್‍ನ ಎಲಪ್ಪುಳ್ಳಿ ಮೂಲದ ಜಯಪ್ರಕಾಶ್ ಬಂಧಿತ ಆರೋಪಿ. ಆರೋಪಿಯನ್ನು ಕಸಬಾ ಪೋಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 21 ರಂದು ಈ ಘಟನೆ ನಡೆದಿತ್ತು. ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ವಾಟ್ಸ್ ಆಪ್‍ನಲ್ಲಿ ವಿಡಿಯೋ ಮೂಲಕ ಜೀವ ಬೆದರಿಕೆ ಹಾಕಿದ್ದ. ಬಳಿಕ ಆರೋಪಿಗಳು ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದರು.
ತಲೆಮರೆಸಿಕೊಂಡು ಮನೆಗೆ ಮರಳುತ್ತಿದ್ದ ಆರೋಪಿಯನ್ನು ಕಸಬಾ ಪೋಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಎಲಪ್ಪುಲ್ಲಿ ತೇನಾರಿ ಮಣಿಯಂಚೇರಿಯಲ್ಲಿರುವ ಆತನ ಮನೆಯಿಂದ ವಶಕ್ಕೆ ಪಡೆಯಲಾಗಿದೆ.