ನವದೆಹಲಿ: ಪುಶ್‌ಬ್ಯಾಕ್ ವೇಳೆ ಪ್ರಯಾಣಿಕರಿದ್ದ ಸ್ಪೈಸ್ ಜೆಟ್ ವಿಮಾನವು ವಿದ್ಯುತ್ ಕಂಬಕ್ಕೆ ಬಡಿದಿರುವ ಘಟನೆ ನವದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ನವದೆಹಲಿ: ಪುಶ್‌ಬ್ಯಾಕ್ ವೇಳೆ ಪ್ರಯಾಣಿಕರಿದ್ದ ಸ್ಪೈಸ್ ಜೆಟ್ ವಿಮಾನವು ವಿದ್ಯುತ್ ಕಂಬಕ್ಕೆ ಬಡಿದಿರುವ ಘಟನೆ ನವದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಸ್ಪೈಸ್ ಜೆಟ್‌ನ ಎಸ್‌ಜಿ-160 ವಿಮಾನವು ದೆಹಲಿಯಿಂದ ಜಮ್ಮುವಿಗೆ ತೆರಳಬೇಕಿತ್ತು.
ಘಟನೆ ಕುರಿತಂತೆ ತನಿಖೆಗೆ ಆದೇಶಿಸಿರುವುದಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿರುವುದಾಗಿ ಎಎನ್‌ಐ ಟ್ವೀಟ್ ಮಾಡಿದೆ.
ವಿಮಾನದ ಪುಶ್‌ಬ್ಯಾಕ್ ಸಂದರ್ಭ ಬಲಬದಿಯ ರೆಕ್ಕೆ ವಿದ್ಯುತ್ ಕಂಬಕ್ಕೆ ಬಡಿದಿದೆ. ಇದರಿಂದ ವಿಮಾನ ಮತ್ತು ಕಂಬ ಎರಡಕ್ಕೂ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.