ಕೊಚ್ಚಿ: ಭಕ್ತರೊಬ್ಬರು ದೇವರಿಗೆ ಸಮರ್ಪಿಸಿದ ರೇಷ್ಮೆ ಸೀರೆಯನ್ನು ದೇವಸ್ವಂ ಅಧಿಕಾರಿ ತನ್ನ ಗೆಳತಿಗೆ ಉಡುಗೊರೆಯಾಗಿ ನೀಡಿದ್ದಾರೆ. ಕಳೆದ ತಿಂಗಳು ಎರ್ನಾಕುಳಂನ ದೇವಸ್ಥಾನವೊಂದರಲ್ಲಿ ದೇವಿಗೆ ಪೂಜೆ ಸಲ್ಲಿಸುವ ಸಮಾರಂಭ ನಡೆದಿತ್ತು. ಸಮಾರಂಭದಲ್ಲಿ ಭಕ್ತರು ನೀಡಿದ ಹರಕೆಯ ರೇಷ್ಮೆ ಸೀರೆಯನ್ನು ದೇವಸ್ವಂ ಅಧಿಕಾರಿ ತನ್ನ ಗೆಳತಿಗೆ ಹಸ್ತಾಂತರಿಸಿದರು.
ಸುಮಾರು ಐದು ಸಾವಿರ ರೂಪಾಯಿ ಬೆಲೆಬಾಳುವ ಸೀರೆಯಾಗಿತ್ತು. ಈ ಸೀರೆಗಳನ್ನು ಸಾಮಾನ್ಯವಾಗಿ ದೇವಾಲಯಗಳಲ್ಲಿ ಹರಾಜು ಮಾಡಲಾಗುತ್ತದೆ. ಈ ದೇವಸ್ಥಾನದಲ್ಲಿ ಸಿಗುವ ಸೀರೆಗಳನ್ನು ಪ್ರಧಾನ ಅರ್ಚಕರು ವರ್ಷಕ್ಕೊಮ್ಮೆ ಭಕ್ತರಿಗೇ ಸಾಮೂಹಿಕವಾಗಿ ವಿತರಿಸುವುದು ವಾಡಿಕೆ. ಆದರೆ ಈ ಬಾರಿ ರೇಷ್ಮೆ ಇಷ್ಟಪಟ್ಟ ದೇವಸ್ವಂ ಅಧಿಕಾರಿ ಅದನ್ನು ಗೆಳತಿಗೆ ನೀಡಿದರು.
ಮರುದಿನ ದೇವಸ್ಥಾನದಲ್ಲಿ ಅದೇ ಸೀರೆ ಉಟ್ಟು ಬಂಧ ಅಧಿಕಾರಿಯ ಗೆಳತಿಯನ್ನು ಗುರುತಿಸಿ ಉಳಿದವರಿಗೆ ಅನುಮಾನ ಬಂದಿತ್ತು. ಉಳಿದ ಸಿಬ್ಬಂದಿ ಕೇಳಿದಾಗ ದೇವಸ್ವಂ ಅಧಿಕಾರಿ ಕೊಟ್ಟಿದ್ದಾಗಿ ಗೆಳತಿ ಸಾರ್ವಜನಿಕವಾಗಿ ಹೇಳಿದ್ದಾಳೆ. ಇದರೊಂದಿಗೆ ಈ ಮಾಹಿತಿ ಎಲ್ಲೆಡೆ ಪ್ರಚಾರಗೊಂಡಿತು. ಲಿಖಿತ ದೂರು ಬಂದರೆ ಪರಿಶೀಲಿಸುವುದಾಗಿ ದೇವಸ್ವಂ ಮಂಡಳಿ ತಿಳಿಸಿದೆ.