HEALTH TIPS

ಶ್ರೇಷ್ಠವಾದ ಕಲ್ಪವೃಕ್ಷವನ್ನು ನೆಟ್ಟುಬೆಳೆಸಿ ಕಲ್ಪವೃಕ್ಷದಂತಹ ಮನಸ್ಸು ಬೆಳೆಯಬೇಕು: ಕೊಂಡೆವೂರು ಶ್ರೀ: ಅಗಲ್ಪಾಡಿ ಮಂದಿರದಲ್ಲಿ ಕಲ್ಪತರು ವಿತರಣೆ ಕಾರ್ಯಕ್ರಮ

                    ಬದಿಯಡ್ಕ: ಅತಿಶ್ರೇಷ್ಠವಾದ ಕಲ್ಪವೃಕ್ಷದ ಗಿಡಗಳನ್ನು ನೆಟ್ಟು ಬೆಳೆಸುವುದಲ್ಲದೆ ಜೈವಿಕ ಕೃಷಿಯೆಡೆಗೆ ಒಲವನ್ನು ಮೂಡಿಸಬೇಕು. ನಮ್ಮ ಆಹಾರಪದ್ಧತಿಯಲ್ಲಿ ಬದಲಾವಣೆಯನ್ನು ತಂದು ಸಾತ್ವಿಕ ಭಾವನೆಯನ್ನು ರೂಢಿಸಿಕೊಳ್ಳಬೇಕು ಎಂದು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ನುಡಿದರು.

                    ಅಗಲ್ಪಾಡಿ ಮಾರ್ಪನಡ್ಕ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಲ್ಲಿ ಕಲ್ಪತರು ವಿತರಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನವನ್ನು ನೀಡುತ್ತಿದ್ದರು. 

             ಜಾತಿ ಮತ ಬೇಧವಿಲ್ಲದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಊರಿನ ಅನೇಕರಿಗೆ ಗಿಡಗಳನ್ನು ವಿತರಿಸಿ ಮಾತನಾಡುತ್ತಾ ಕಲ್ಪವೃಕ್ಷದಲ್ಲಿ ಎಲ್ಲವೂ ಅಡಗಿದೆ. ಕಲ್ಪವೃಕ್ಷದಂತಹ ಮನಸ್ಸು ನಮ್ಮದಾಗಬೇಕು ಎಂದರು. 

                  ಶ್ರೀಗಳ ನೇತೃತ್ವದಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆ, ಭಜನಮಂದಿರ, ತರವಾಡುಗಳ ಪದಾಧಿಕಾರಿಗಳಿಗೆ ಮತ್ತು ಕೃಷಿಕರಿಗೆ ಸ್ವಾಮೀಜಿಯವರು ತೆಂಗಿನ ಗಿಡಗಳನ್ನು ವಿತರಿಸಲಾಯಿತು. ಮಂಗಳೂರಿನ ಉದ್ಯಮಿ ಮಧುಸೂದನ ಆಯರ್ ಸಮಾರಂಭದಲ್ಲಿ ಅಧ್ಯಕ್ಷತೆ  ವಹಿಸಿದ್ದರು. ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ, ಯಾದವ ಸಂಘದ ಅಧ್ಯಕ್ಷ ಸುಧಾಮ ಪದ್ಮಾರು, ಮಂದಿರದ ರಕ್ಷಾಧಿಕಾರಿ ಜನಾರ್ದನ ಮಣಯಾಣಿ ಬೆದ್ರುಕೂಡ್ಲು, ಮಂದಿರದ ಗೌರವಾಧ್ಯಕ್ಷೆ ವಸಂತಿ ಟೀಚರ್ ಅಗಲ್ಪಾಡಿ, ಗೌರವಾಧ್ಯಕ್ಷ ಬಾಬು ಮಣಿಯಾಣಿ ಜಯನಗರ, ನಿವೃತ್ತ ಪ್ರಾಂಶುಪಾಲ ಪ್ರೊ. ಎ.ಶ್ರೀನಾಥ್, ಅಚ್ಚುತ ಮಾಸ್ತರ್ ಅಗಲ್ಪಾಡಿ ಮೊದಲಾದವರು ಉಪಸ್ಥಿತರಿದ್ದರು. ಯಾದವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಕಲ್ಲಕಟ್ಟ ಸ್ವಾಗತಿಸಿ ಮಂದಿರದ  ಕಾರ್ಯದರ್ಶಿ ರಾಜೇಶ್ ಮಾಸ್ತರ್ ಅಗಲ್ಪಾಡಿ ವಂದಿಸಿದರು. ಮಂದಿರದ ಪ್ರಧಾನ ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರು ಕಾರ್ಯಕ್ರಮವನ್ನು ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries