HEALTH TIPS

ಮಾತುಕತೆ ಮೂಲಕ ಕಾನೂನು ವಿವಾದ ಇತ್ಯರ್ಥಕ್ಕೆ ಅಮೆಜಾನ್‌-ಫ್ಯೂಚರ್‌ ಗ್ರುಪ್ ಒಪ್ಪಿಗೆ

          ನವದೆಹಲಿ: ಅಮೆಜಾನ್‌ ಮತ್ತು ಫ್ಯೂಚರ್‌ ಸಮೂಹವು ಮಾತುಕತೆಯ ಮೂಲಕ ಕಾನೂನು ವಿವಾದವನ್ನು ಬಗೆಹರಿಸಿಕೊಳ್ಳಲು ಮುಂದಾಗಿವೆ.

              ಫ್ಯೂಚರ್ ಸಮೂಹವು ತನ್ನ ರಿಟೇಲ್‌ ಹಾಗೂ ಸಗಟು ವಹಿವಾಟು ವಿಭಾಗಗಳನ್ನು ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ಗೆ ಮಾರಾಟ ಮಾಡುವುದನ್ನು ವಿರೋಧಿಸಿ ಅಮೆಜಾನ್‌ ನ್ಯಾಯಾಲಯದ ಮೆಟ್ಟಿಲೇರಿದೆ.

             ಎರಡೂ ಕಂಪನಿಗಳ ಪ್ರತಿನಿಧಿಗಳು ಸಂಧಾನ ಮಾತುಕತೆ ನಡೆಸುವಂತೆ ಅಮೆಜಾನ್‌ ಪರ ವಕೀಲ ಗೋಪಾಲ್ ಸುಬ್ರಮಣಿಯಂ ಅವರು ಗುರುವಾರ ಸುಪ್ರೀಂ ಕೋರ್ಟ್‌ ವಿಚಾರಣೆಯ ವೇಳೆ ಸಲಹೆ ನೀಡಿದರು.

            'ಈ ಕಾನೂನು ಸಮರದಲ್ಲಿ ಯಾರೊಬ್ಬರೂ ಜಯಿಸುವುದಿಲ್ಲ' ಎಂದು ಹೇಳುವ ಮೂಲಕ ಫ್ಯೂಚರ್‌ ಸಮೂಹದ ವಕೀಲರು ಮಾತುಕತೆಗೆ ಒಪ್ಪಿಗೆ ನೀಡಿದರು. ಮಾತುಕತೆ ನಡೆಸಿ ಒಂದು ತೀರ್ಮಾನಕ್ಕೆ ಬರಲು ಎರಡೂ ಕಡೆಯವರು 10 ದಿನ ತೆಗೆದುಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries