ಬದಿಯಡ್ಕ: ವಿಶ್ವ ಜಲ ದಿನದ ಅಂಗವಾಗಿ ಶ್ರೀಸತ್ಯಸಾಯಿ ಓರ್ಫನೇಜ್ ಟ್ರಸ್ಟ್ ನೇತೃತ್ವದಲ್ಲಿ ಇಂದು(ಮಾ.22)ಬದಿಯಡ್ಕ ಗ್ರಾ.ಪಂ. ಹಾಗೂ ನೀರ್ಚಾಲು ಜಲಸ್ನೇಹಿಗಳ ಸಹಕಾರದೊಂದಿಗೆ ನೀರ್ಚಾಲು ಮದಕ ಪರಿಸರದಲ್ಲಿ ಮಾಹಿತಿ ಶಿಬಿರ ಆಯೋಜಿಸಿದೆ.
ಅಪರಾಹ್ನ 3 ರಿಂದ ನಡೆಯುವ ಸಮಾರಂಭದಲ್ಲಿ ಬದಿಯಡ್ಕ ಗ್ರಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಎಂ. ಅಧ್ಯಕ್ಷತೆ ವಹಿಸುವರು. ಗ್ರಾ.ಪಂ. ಅಧ್ಯಕ್ಷೆ ಶಾಂತಾ ಬಿ. ಉದ್ಘಾಟಿಸುವರು. ಗ್ರಾ.ಪಂ. ಮಾಜಿ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಪೆರಡಾಲ ಸೇ.ಸ. ಬ್ಯಾಂಕ್ ಅಧ್ಯಕ್ಷ ಜಯದೇವ ಖಂಡಿಗೆ, ಗ್ರಾ.ಪಂ. ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಗ್ರಾ.ಪಂ. ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷೆ ಸೌಮ್ಯಾ ಮಹೇಶ್, ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ರವಿಕುಮಾರ್ ರೈ, ಆರೋಗ್ಯ, ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ರಶೀದ ಕೆ, ಸದಸ್ಯರುಗಳಾದ ಜಯಶ್ರೀ ಪಿ, ಈಶ್ವರ ನಾಯ್ಕ್, ಜ್ಯೋತಿ ಕುಮಾರಿ ವೈ, ಅನಿತಾ, ಹಮೀದ್ ಪಳ್ಳತ್ತಡ್ಕ, ಶುಭಲತಾ ರೈ, ಬಾಲಕೃಷ್ಣ ಶೆಟ್ಟಿ, ಸುಬೈದಾ ಬಿ, ಅನಸೂಯ, ಫಾತಿಮತ್ ಸಮೀನ, ಅಬ್ದುಲ್ ರಹಮಾನ್ ಸಿ.ಎಚ್, ಡಿ.ಶಂಕರ ಮೊದಲಾದವರು ಉಪಸ್ಥಿತರಿರುವರು. ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಮಣ್ಣು-ಜಲ ಸಂರಕ್ಷಣಾಧಿಕಾರಿ ವಿ.ಎಂ.ಅಶೋಕ್ ಕುಮಾರ್, ಜಲತಜ್ಞ ವಿ.ಪುರುಷೋತ್ತಮ ಭಟ್ ವಾಶೆ ಮಾಹಿತಿ ನೀಡುವರು. ಜಲಜೀವನ್ ಮಿಷನ್ ಬಗ್ಗೆ ಟೀಂ ಲೀಡರ್ ದೀಪ್ತಿ ಎಸ್ ಕುಂಜತ್ತೂರು ವಿವರಣೆ ನೀಡುವರು. ರಾಜ್ಯ ಕೃಷಿ ಅಭಿವೃದ್ದಿ ಸಮಿತಿ ಮಾಜಿ ಸದಸ್ಯ ಎಂ.ಎಚ್.ಜನಾರ್ದನ, ಗ್ರಾ.ಪಂ.ಸದಸ್ಯೆ ಸ್ವಪ್ನಾ ಕೆ.ಪಿ. ನೇತೃತ್ವ ನೀಡುವರು.