ಕೀವ್: ರಷ್ಯಾ ನಡೆಸುತ್ತಿರುವ ದಾಳಿಯಿಂದ ಶೆರ್ನೊಬಿಲ್ ಪರಮಾಣು ಸ್ಥಾವರ ಕೇಂದ್ರದಲ್ಲಿ ವಿದ್ಯತ್ ಕಡಿತಗೊಂಡಿದ್ದು ಮೂಲಭೂತ ಸೌಕರ್ಯಗಳಿಲ್ಲದೆ ಸಿಬ್ಬಂದಿಗಳು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಉಕ್ರೇನ್ ಆರೋಪಿಸಿದೆ.
ಕೇಂದ್ರದ ಒಳಗೆ ಸಿಲುಕಿಕೊಂಡಿರುವ ಸಿಬ್ಬಂದಿಗಳ ಬಳಿ ಕೆಲವೇ ದಿನಗಳಿಗೆ ಆಗುವಷ್ಟು ಆಹಾರ ಮತ್ತು ನೀರು ಲಭ್ಯವಿದೆ. ಇದರಿಂದಾಗಿ ಪರಮಾಣು ಸ್ಥಾವರದ ಉಸ್ತುವಾರಿ ಕಷ್ಟವಾಗುತ್ತಿದೆ.
ಮುಂಬರುವ ದಿನಗಳಲ್ಲಿ ಇದರಿಂದ ನ್ಯೂಕ್ಲಿಯರ್ ಅವಘಡದಂಥ ಅಪಾಯಕಾರಿ ಸನ್ನಿವೇಶ ಉದ್ಭವಿಸಬಹುದು ಎಂದು ಉಕ್ರೇನ್ ಎಚ್ಚರಿಸಿದೆ. ಸ್ಥಾವರದ ಸಿಬ್ಬಂದಿಗೆ ರಕ್ಷಣೆ ಒದಗಿಸುವಂತೆ ಉಕ್ರೇನ್ ಅಂತಾರಾಷ್ಟ್ರೀಯ ಅಣು ಪ್ರಾಧಿಕಾರದ ಮೊರೆ ಹೋಗಿದೆ.