ರಾಂಚಿ: ಜಾರ್ಖಂಡ್‍ನ ಜಮ್ತಾರ ಎಂಬಲ್ಲಿನ ಕಸ್ತ ಗ್ರಾಮದ ಜನರು ತಾವಾಗಿಯೇ ಹಣ ಸಂಗ್ರಹಿಸಿ ಅಜಯ್ ನದಿಗೆ ಅಡ್ಡಲಾಗಿ ಸುಮಾರು ಒಂದು ಕಿಮೀ ಉದ್ದದ ಬಿದಿರಿನ ಸೇತುವೆ ನಿರ್ಮಿಸಿ ತಮ್ಮ ಗ್ರಾಮದ ಮಕ್ಕಳಿಗೆ ತಮ್ಮ ಶಾಲಾಕಾಲೇಜು ಸುಲಭವಾಗಿ ತಲುಪಲು ಸಹಾಯ ಮಾಡಿದ್ದಾರೆ.

ಸೇತುವೆ ನಿರ್ಮಿಸುವಂತೆ ಸ್ಥಳೀಯ ಪ್ರಾಧಿಕಾರಗಳಿಗೆ ಮಾಡಿದ ಸತತ ಮನವಿಗಳು ಫಲಗೂಡದೇ ಇದ್ದಾಗ ಗ್ರಾಮಸ್ಥರು ಈ ತೀರ್ಮಾನ ಕೈಗೊಂಡಿದ್ದಾರೆ.
ಈ ಸೇತುವೆ ನಿರ್ಮಾಣದಿಂದ ಕಸ್ತಾ ಗ್ರಾಮದಿಂದ ಅಸನ್ಸೊಲೆ ಎಂಬಲ್ಲಿಗೆ ತೆರಳಲು ಜನರು ಕ್ರಮಿಸಬೇಕಾದ ದೂರ 25 ಕಿಮೀನಷ್ಟು ಕಡಿಮೆಯಾಗಿದ್ದು ಇದು 30,000 ಜನರಿಗೆ ಪ್ರಯೋಜನಕಾರಿಯಾಗಲಿದೆ ಎಂದು ತಿಳಿದು ಬಂದಿದೆ.
ಈ ಸೇತುವೆ ಬಳಸಿ ದಿನಂಪ್ರತಿ ವಿದ್ಯಾರ್ಥಿಗಳೂ ಸೇರಿದಂತೆ 3,500 ಜನರು ಶಾಲಾ ಕಾಲೇಜುಗಳಿಗೆ ನಡೆದುಕೊಂಡು ಅಥವಾ ತಮ್ಮ ದ್ವಿಚಕ್ರವಾಹನಗಳಲ್ಲಿ ಸಂಚರಿಸುತ್ತಾರೆ.
ಈ ಗ್ರಾಮದ ಹೆಚ್ಚಿನ ಮಕ್ಕಳು ಇಲ್ಲಿಂದ 15ರಿಂದ 20 ಕಿಮೀ ಆಚೆಗಿರುವ ಪಶ್ಚಿಮ ಬಂಗಾಳದ ಶಾಲಾಕಾಲೇಜುಗಳಲ್ಲಿ ಕಲಿಯುವವರಾಗಿದ್ದಾರೆ.
ಗ್ರಾಮಸ್ಥರಿಂದ ಹಣ ಸಂಗ್ರಹಿಸಿ ಸುಮಾರು ರೂ ಒಂದು ಲಕ್ಷ ವೆಚ್ಚದಲ್ಲಿ ಒಂದು ತಿಂಗಳು ಅವಧಿಯಲ್ಲಿ ಸೇತುವೆ ಪೂರ್ಣಗೊಳಿಸಲಾಗಿದೆ.