ಕೀವ್:ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಪಾಶ್ಚಿಮಾತ್ಯ ದೇಶಗಳು ಖಂಡಿಸುತ್ತಿವೆ. ಈ ಯುದ್ಧದಲ್ಲಿ ಉಕ್ರೇನ್‌ನೊಂದಿಗೆ ವಿಶ್ವದಾದ್ಯಂತ ದೇಶಗಳು ನಿಂತಿರುವ ರೀತಿಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೋಪಗೊಂಡಿದ್ದಾರೆ.
ರಷ್ಯಾ ತನ್ನ ಬಾಹ್ಯಾಕಾಶ ರಾಕೆಟ್‌ನಿಂದ ಹಲವು ದೇಶಗಳ ಧ್ವಜಗಳನ್ನು ತೆಗೆದುಹಾಕಿದೆ. ರಷ್ಯಾ ತನ್ನ ಬಾಹ್ಯಾಕಾಶ ರಾಕೆಟ್‌ನಿಂದ ಅಮೆರಿಕ, ಬ್ರಿಟನ್ ಮತ್ತು ಜಪಾನ್ ಧ್ವಜಗಳನ್ನು ತೆಗೆದುಹಾಕಿದ್ದು ಭಾರತದ ಧ್ವಜವನ್ನು ಹಾಗೇ ಉಳಿಸಿಕೊಂಡಿದೆ. ವಿಶ್ವಸಂಸ್ಥೆಯಲ್ಲಿ ಭಾರತ ಎರಡು ಬಾರಿ ರಷ್ಯಾ ವಿರುದ್ಧ ಮತದಾನ ಮಾಡಲು ನಿರಾಕರಿಸಿತ್ತು.