ನವದೆಹಲಿ: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಿಧಿಸಲಾಗಿದ್ದ ಕೊರೊನಾ ಮಾರ್ಗಸೂಚಿಯನ್ನು ಉಕ್ರೇನ್ ವಾಪಸಾತಿಗಳಿಗೆ ಸಡಿಲಿಸಲಾಗುವುದೆಂದು ಕೇಂದ್ರ ಸಚಿವಾಲಯ ತಿಳಿಸಿದೆ.
ಇದಕ್ಕೂ ಮೊದಲು ಅಂತಾರಾಷ್ಟ್ರೀಯ ಪ್ರಯಾಣಿಕರು ಭಾರತಕ್ಕೆ ಪ್ರಯಾಣಿಸುವ ಮುನ್ನ RT-PCR ಪರೀಕ್ಷೆಯ ಪ್ರಮಾಣಪತ್ರ ಮತ್ತು ಕೊರೊನಾ ಲಸಿಕಾ ಪ್ರಮಾಣ ಪತ್ರಗಳನ್ನು ಏರ್ ಸುವಿಧಾ ಜಾಲತಾಣದಲ್ಲಿ ಅಪ್ ಲೋಡ್ ಮಾಡಬೇಕಿತ್ತು.
ಈ ನಿಯಮಾವಳಿಯನ್ನು ಯುದ್ಧಗ್ರಸ್ಥ ಉಕ್ರೇನ್ ನಿಂದ ವಾಪಸಾಗುತ್ತಿರುವ ಭಾರತೀಯರಿಗಾಗಿ ತಿದ್ದುಪಡಿ ಮಾಡಲಾಗಿದೆ.