ಕಾಸರಗೋಡು: ಗುಡ್ ಮಾರ್ನಿಂಗ್ ಕಾಸರಗೋಡು ವತಿಯಿಂದ ಆರನೇ ವರ್ಷದ ಕಾಸರಗೋಡು ಮ್ಯಾರಥಾನ್ ಭಾನುವಾರ ನಡೆಯಿತು. ಮ್ಯಾರಥಾನ್ ಹಾಗೂ ಮಿನಿ ಮ್ಯಾರಥಾನ್‍ಗಳಲ್ಲಿ ಐನ್ನೂರಕ್ಕೂ ಹೆಚ್ಚು ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಉತ್ತಮ ಆರೋಗ್ಯ ಮತ್ತು ಸೌಹಾರ್ದತೆ ಎಂಬ ಸಂದೇಶದೊಂದಿಗೆ ಮ್ಯಾರಥಾನ್ ಆಯೋಜಿಸಲಾಗಿತ್ತು.
ಕಾಸರಗೋಡು ನಗರಸಭಾ ಸ್ಟೇಡಿಯಂನಿಂದ ಆರಂಭಗೊಂಡ ಮ್ಯಾರಥಾನ್‍ಗೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್‍ರಣವೀರ್‍ಚಂದ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಮ್ಯಾರಥಾನ್‍ಗೆ ಧ್ವಜ ತೋರಿಸಿ ಚಾಲನೆ ನೀಡಿದರು. 12ಕಿ.ಮೀ ಮ್ಯಾರಥಾನ್ ನಗರಸಭಾ ಸ್ಟೇಡಿಯಂನಿಂದ ಆರಂಭಗೊಂಡು ಪಾರಕಟ್ಟ, ಮಧೂರು ವರೆಗೆ ತೆರಳಿ, ಅಲ್ಲಿಂದ ವಾಪಸಾಗಿ ಎಸ್‍ಪಿ ನಗರ, ಚೆಟ್ಟುಂಗುಯಿ ಮೂಲಕ ಸ್ಟೇಡಿಯಂಗೆ ವಾಪಸಾಗಿತ್ತು.
ಕೇರಳ ಮತ್ತು ಇತರ ರಾಜ್ಯಗಳ ಅತ್ಲೆಟ್‍ಗಳು ಪಾಲ್ಗೊಂಡಿದ್ದರು. ಸಮರೋಪ ಸಮಾರಂಭದಲ್ಲಿ ಎಂ. ಸದಾಶಿವನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎನ್.ಎ ನೆಲ್ಲಿಕುನ್ನು, ಇ.ಚಂದ್ರಶೇಖರನ್. ಎಂ. ರಾಜಗೋಪಾಳನ್, ನಗರಸಭಾಧ್ಯಕ್ಷ ವಿ.ಎಂ ಮುನೀರ್, ಮಧೂರ್ ಗ್ರಾಪಂ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಅಧ್ಯಕ್ಷ ಹಬೀಬ್ ರಹಮಾನ್, ಕಾಸರಗೋಡು ಪ್ರೆಸ್‍ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ, ಕಾರ್ಯದರ್ಶಿ ಕೆ.ವಿ ಪದ್ಮೇಶ್ ಉಪಸ್ಥಿತರಿದ್ದರು.