ಬದಿಯಡ್ಕ: ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಅವರು ಗುರುವಾರ ಜಿಲ್ಲೆಗೆ ಆಗಮಿಸಿದ್ದು ವಿವಿಧೆಡೆಗಳಿಗೆ ಭೇಟಿ ನೀಡಿದರು. ಬದಿಯಡ್ಕದಲ್ಲಿ ಇತ್ತೀಚೆಗೆ ನಿಧನರಾದ ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷ ಬಿ.ಸುಂದರ ಪ್ರಭು ಅವರ ಮನೆಗೆ ತೆರಳಿ ಕುಟುಂಬದವರೊಂದಿಗೆ ಮಾತನಾಡಿದರು. ನಂತರ ದಿವಂಗತ ಕಿಳಿಂಗಾರು ಸಾಯಿರಾಂ ಭಟ್ ಅವರ ಮನೆಗೆ ಹಾಗೂ ಪೆರ್ಲದ ಬಿಜೆಪಿ ಮುಖಂಡ ದಿವಂಗತ ಟಿ.ಆರ್.ಕೆ.ಭಟ್ ಅವರ ಮನೆಗೆ ತೆರಳಿ ಕುಟುಂಬದವರೊಂದಿಗೆ ಮಾತನಾಡಿದರು. ಬಿಜೆಪಿ ಜಿಲ್ಲಾ ಹಾಗೂ ಮಂಡಲ ಪದಾಧಿಕಾರಿಗಳು ಜೊತೆಗಿದ್ದರು.