ಸ್ಕಿನ್ ಪಿಗ್ಮೆಂಟೇಷನ್ ಯಾರಿಗೆ ಬೇಕಾದರೂ ಬರಬಹುದು. ಸ್ಕಿನ್ ಪಿಗ್ಮೆಂಟೇಷನ್ ಬಂದರೆ ಮುಖದಲ್ಲಿ ಕಂದು ಅಥವಾ ಕಪ್ಪು ಚುಕ್ಕಿ ಬಿದ್ದು ಕಲೆ ಹೈಲೈಟ್ ಆಗುವುದು. ಅದರಲ್ಲೂ ಈ ಸಮಸ್ಯೆ ಇದ್ದರೆ ಬೇಸಿಗೆಯಲ್ಲಿ ಮತ್ತಷ್ಟು ಹೆಚ್ಚಾಗುವುದು. ಬೇಸಿಗೆಯಲ್ಲಿ ಮೆಲಾನಿನ್ ಉತ್ಪತ್ತಿ ಹೆಚ್ಚಾಗುತ್ತೆ, ಇದರಿಂದ ಮುಖದಲ್ಲಿ ಕಪ್ಪು ಕಲೆ ಎದ್ದು ಕಾಣುವುದು.
ಸ್ಕಿನ್ ಪಿಗ್ಮೆಂಟೇಷನ್ ಪುರುಷರು ಹಾಗೂ ಮಹಿಳೆಯರಲ್ಲಿ ಕಂಡು ಬರುತ್ತದೆ, ಆದರೆ ಮಹಿಳೆಯರಲ್ಲಿ ಮುಖದಲ್ಲಿ ಕಲೆ ಬೇಗನೆ ಹೈಲೈಟ್ ಆಗುತ್ತೆ, ಪುರುಷರು ಗಡ್ಡ ಬಿಟ್ಟಿದ್ದರೆ ಅಷ್ಟು ಗೊತ್ತಾಗುವುದಿಲ್ಲ, ಅದೇ ಕ್ಲೀನ್ ಶೇವ್ ಮಾಡಿದರೆ ಗೊತ್ತಾಗುತ್ತೆ.
ಬೇಸಿಗೆಯಲ್ಲಿ ಪಿಗ್ಮೆಂಟೇಷನ್ ಸಮಸ್ಯೆ ಕಡಿಮೆ ಮಾಡಲು ಈ ರೀತಿ ತ್ವಚೆಯ ಆರೈಕೆ ಮಾಡಿ:ಮೊದಲು ನಿಮ್ಮ ಸ್ಕಿನ್ ಟೈಪ್‌ನ ಗಮನ ನೀಡಿ ನಿಮ್ಮದು ಮೊಡವೆ ತ್ವಚೆಯಾಗಿದ್ದರೆ ನೀವು ಚಿಕಿತ್ಸೆ ಪಡೆಯುವುದು ಒಳ್ಳೆಯದು,ನಿಮ್ಮದು ತುಂಬಾ ಸೆನ್ಸಿಟಿವ್ ತ್ವಚೆಯಾಗಿದ್ದರೆ ನೀವು ತುಸು ಹೆಚ್ಚಿನ ಗಮನ ನೀಡಬೇಕಾಗುತ್ತೆ.
SPF ತುಂಬಾ ಅವಶ್ಯಕ ನೀವು ಪಿಗ್ಮೆಂಟೇಷನ್ ತಡೆಗಟ್ಟಲು ಬಿಸಿಲಿಗೆ ಹೋಗುವ ಮುನ್ನ ಸನ್‌ಸ್ಕ್ರೀನ್ ಲೋಷನ್ ಹಚ್ಚಿ. ನೀವು SPF 15 ಅಥವಾ 30 ಇರುವುದನ್ನು ಬಳಸಿ. ಇದನ್ನು ಪ್ರತಿ ಗಂಟೆಗೊಮ್ಮೆ ಹಚ್ಚಿ. ಇದರಿಂದ ಕಲೆ ಹೆಚ್ಚಾಗುವುದನ್ನು ತಡೆಗಟ್ಟಬೇಕು. ಅಲ್ಲದೆ ಇರುವ ಪಿಗ್ಮೆಂಟೇಷನ್ ಕಲೆ ತೆಳುವಾಗುವುದು.
ಮುಖವನ್ನು ಚಿವುಟಬೇಡಿ ಮೊಡವೆ, ಬ್ಲ್ಯಾಕ್‌ಹೆಡ್ಸ್ ಏನೇ ಇರಲಿ ಮುಖವನ್ನು ಚಿವುಟಬೇಡಿ. ನಿಮ್ಮ ಉಗುರನ್ನು ಮುಖಕ್ಕೆ ತಾಗಿಸಬೇಡಿ. ಇದರಿಂದ ಕಲೆ ಹೆಚ್ಚುವುದು. ಬದಲಿಗೆ ಮುಖವನ್ನು ಕ್ಲೀನ್ ಅಪ್ ಮಾಡಿಸಿ.
ಆ್ಯಂಟಿಆಕ್ಸಿಡೆಂಟ್ ಅಧಿಕವಿರುವ ಸ್ಕಿನ್‌ಕೇರ್ ಪ್ರಾಡೆಕ್ಟ್ ಬಳಸಿ ನೀವು ಬಳಸುವ ಕ್ರೀಮ್‌ನಲ್ಲಿ ವಿಟಮಿನ್ ಸಿ ಸೆರಮ್ ಇರಬೇಕು. ಇದು ಮುಖದ ತ್ವಚೆಯನ್ನು ರಕ್ಷಣೆ ಮಾಡುತ್ತೆ, ನೀವು ವಿಟಮಿನ್ ಎ, ಸಿ ಮತ್ತು ಇ ಇರುವ ಕ್ರೀಮ್ ಬಳಸಿ. ಇಂಥ ಕ್ರೀಮ್ ಪಿಗ್ಮೆಂಟೇಷನ್ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತೆ.
ಪ್ರತಿದಿನ ತ್ವಚೆಯನ್ನು ಎಕ್ಸ್‌ಫೋಲೆಟ್ ಮಾಡಿ ಡಾರ್ಕ್ ಮಾರ್ಕ್ಸ್ ಕಡಿಮೆ ಮಾಡಲು ಪ್ರತಿದಿನ ಮುಖವನ್ನು ಎಕ್ಸ್‌ಫೋಲೆಟ್ ಮಾಡಿ. ಎಕ್ಸ್‌ಫೋಲೆಟ್ ಮಾಡಿ ಡೆಡ್ ಸ್ಕಿನ್ ತೆಗೆದಾಗ ಮುಖದ ಆರೋಗ್ಯ ಹೆಚ್ಚುವುದು, ಕಲೆ ತೆಳುವಾಗುತ್ತಾ ಬರುವುದು. ಅಲ್ಲದೆ ಎಕ್ಸ್‌ಫೋಲೆಟ್ ಮಾಡಿದಾಗ ತ್ವಚೆ ತುಂಬಾ ಸೂಕ್ಷ್ಮವಾಗುತ್ತೆ, ಆದ್ದರಿಂದ ಬಿಸಿಲಿಗೆ ಹೋಗುವಾಗ ಸನ್‌ಸ್ಕ್ರೀನ್ ಲೋಷನ್ ಬಳಸಿ. ಮುಖಕ್ಕೆ ಬಿಸಿಲು ಬೀಳದಂತೆ ಕೊಡೆ ಹಿಡಿಯಿರಿ ಅಥವಾ ಬಟ್ಟೆಯಿಂದ ಕವರ್ ಮಾಡಿ.
ಪ್ರೊಫೆಷನಲ್ ಟ್ರೀಟ್ಮೆಂಟ್ ಪಡೆಯಿರಿ ಪಿಗ್ಮೆಂಟೇಷನ್ ಚಿಕಿತ್ಸೆ ಕಡಿಮೆಯಾಗಲು ಚರ್ಮರೋಗ ತಜ್ಞರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆಯಿರಿ. ಡೆರ್ಮಾ ವೈಟ್ ಸ್ಕಿನ್ ಕೇರ್ ಟ್ರೀಟ್ಮೆಂಟ್ ನಿಮಗೆ ಕಲೆಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಹಕಾರಿಯಾಗಿದೆ.