ಚೀನಾದಲ್ಲಿ ವಿಧಿಸಲಾಗಿರುವ ನಿರ್ಬಂಧಗಳ ಪರಿಣಾಮ ಅನೇಕ ವಿದ್ಯಾರ್ಥಿಗಳು ದೇಶಕ್ಕೆ ಮರಳಲು ಹಾಗೂ ಶಿಕ್ಷಣವನ್ನು ಮುಂದುವರಿಸಲು ಆಗಿಲ್ಲ ಎಂದು ಯುಜಿಸಿ ಇದಕ್ಕೆ ಕಾರಣವನ್ನು ನೀಡಿದೆ.
ನಿರ್ಬಂಧಗಳನ್ನು ಸಡಿಲಿಸದ ಕಾರಣ ಚೀನಾದ ಆಡಳಿತವು ಈಗಾಗಲೇ ಆನ್‌ಲೈನ್ ಮೂಲಕ ಕೋರ್ಸ್‌ಗಳನ್ನು ನಡೆಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದೆ ಎಂದೂ ಉಲ್ಲೇಖಿಸಿದೆ.
ನಿಯಮಗಳ ಪ್ರಕಾರ, ಯುಜಿಸಿ ಅಥವಾ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (ಎಐಸಿಟಿಇ) ಕೇವಲ ಆನ್‌ಲೈನ್ ಮೂಲಕ ನಡೆಸಿದ ಇಂತಹ ಕೋರ್ಸ್‌ಗಳಿಗೆ, ಪೂರ್ವಾನುಮತಿ ಇಲ್ಲದಿದ್ದಲ್ಲಿ ಮಾನ್ಯತೆ ನೀಡುವುದಿಲ್ಲ ಎಂದು ಯುಜಿಸಿ ಪ್ರಕಟಣೆಯಲ್ಲಿ ತಿಳಿಸಿದೆ.