HEALTH TIPS

ಹಂದಿ ಹೃದಯ ಕಸಿಗೊಳಗಾದ ಎರಡು ತಿಂಗಳಲ್ಲೇ ಅಮೇರಿಕಾದ ವ್ಯಕ್ತಿ ಸಾವು

Top Post Ad

Click to join Samarasasudhi Official Whatsapp Group

Qries

               ಮೇರಿಲ್ಯಾಂಡ್: ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಹಂದಿ ತಳಿಯ ಹೃದಯ ಕಸಿಗೊಳಗಾಗಿದ್ದ ವ್ಯಕ್ತಿ ಶಸ್ತ್ರಚಿಕಿತ್ಸೆಯ ಎರಡು ತಿಂಗಳ ಬಳಿಕ ಮಾರ್ಚ್‌ 8 ರಂದು ಮೃತಪಟ್ಟಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಮೇರಿಲ್ಯಾಂಡ್‌ ಮೆಡಿಕಲ್‌ ಸಿಸ್ಟಮ್‌ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

           ಜನವರಿ 7 ರಂದು ಅಮೇರಿಕದ ತಜ್ಞ ವೈದ್ಯರು ಹಂದಿ ಹೃದಯವನ್ನು ಮಾನವನಿಗೆ ಅಳವಡಿಸಿದ ಈ ಯಶಸ್ವೀ ಶಸ್ತ್ರಚಿಕಿತ್ಸೆ ವೈದ್ಯಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. ಈ ಶಸ್ತ್ರ ಚಿಕಿತ್ಸೆಯು ದೀರ್ಘಕಾಲದಿಂದ ಸಮಸ್ಯೆಯಾಗಿ ಬಂದಿದ್ದ ಮಾನವ ಅಂಗಾಗಂಗ ಕೊರತೆಯನ್ನು ನೀಗಿಸಬಹುದೆಂಬ ಹೊಸ ಭರವಸೆಯನ್ನು ನೀಡಿತ್ತು.


               57 ವರ್ಷದ ಡೇವಿಡ್‌ ಬೆನ್ನೆಟ್‌ ಹೃದಯ ಕಸಿ ಚಿಕಿತ್ಸೆಗೆ ಒಳಗಾದವರು. ಶಸ್ತ್ರ ಚಿಕಿತ್ಸೆಯ ಬಳಿಕ ಕೆಲವು ವಾರಗಳ ಆರೋಗ್ಯಪೂರ್ಣವಾಗಿದ್ದರು, ಅವರ ಕಸಿ ಹೃದಯ ಯಾವುದೇ ನಕರಾತ್ಮಕ ಸೂಚನೆಗಳನ್ನು ನೀಡಿರಲಿಲ್ಲ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

              "ಹಲವು ದಿನಗಳ ಹಿಂದೆ ಅವರ ಸ್ಥಿತಿಯು ಹದಗೆಡಲು ಪ್ರಾರಂಭಿಸಿತು. ಅವರು ಚೇತರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾದ ನಂತರ, ಅವರಿಗೆ ಉಪಶಮನ ಆರೈಕೆಯನ್ನು ನೀಡಲಾಯಿತು. ಅವರು ತಮ್ಮ ಅಂತಿಮ ಕ್ಷಣಗಳನ್ನು ತಮ್ಮ ಕುಟುಂಬದೊಂದಿಗೆ ಕಳೆದರು" ಎಂದು ಆಸ್ಪತ್ರೆ ಹೇಳಿಕೆ ತಿಳಿಸಿದೆ.

                2021 ರ ಅಕ್ಟೋಬರ್‌ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾದ ಬೆನೆಟ್‌ ಅವರ ಆರೋಗ್ಯ ಸ್ಥಿತಿಯು ಕಳಪೆಯಾಗಿದ್ದಿತು. ಮಾನವ ಹೃದಯ ಜೋಡಣೆಯು ಅಸಾಧ್ಯವೆನಿಸಿದ್ದರಿಂದ ತಳಿಯವಾಗಿ ಮಾರ್ಪಡಿಸಿದ ಹಂದಿ ಹೃದಯವನ್ನು ಜೋಡಿಸಲಾಯಿತು ಎಂದು ಆಸ್ಪತ್ರೆ ಮೂಲಗಳು ಹೇಳಿದೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries