ಆಲಪ್ಪುಳ: ಆಲಪ್ಪುಳ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ರೇಣು ರಾಜ್ ಅವರನ್ನು ನೇಮಕ ಮಾಡಲಾಗಿದೆ. ರೇಣು ರಾಜ್ ಅಲಪ್ಪುಳ ಜಿಲ್ಲೆಯ 53ನೇ ಕಲೆಕ್ಟರ್ ಆಗಿ ನೇಮಕವಾಗಿದ್ದಾರೆ. ನೂತನ ಜಿಲ್ಲಾಧಿಕಾರಿಯನ್ನು ಎಡಿಎಂ ಜೆ ಮೊಬಿ ಬರಮಾಡಿಕೊಂಡರು. ರೇಣು ರಾಜ್ ಪೋಷಕರೊಂದಿಗೆ ಕಲೆಕ್ಟರೇಟ್ ಗೆ ಬಂದಿದ್ದರು.
ಎ. ಅಲೆಕ್ಸಾಂಡರ್ ಅವರ ನಿವೃತ್ತಿಯ ನಂತರ ಅಲಪ್ಪುಳದ ಹೊಸ ಕಲೆಕ್ಟರ್ ಆಗಿ ರೇಣು ರಾಜ್ ಅಧಿಕಾರ ವಹಿಸಿಕೊಂಡರು. ರೇಣು ರಾಜ್ 2015ರ ಐಎಎಸ್ ಬ್ಯಾಚ್‌ನ ಅಧಿಕಾರಿ. ಅವರು ನಗರ ವ್ಯವಹಾರಗಳ ಇಲಾಖೆ ಮತ್ತು ಅಮೃತ್ ಮಿಷನ್‌ನ ನಿರ್ದೇಶಕರಾಗಿದ್ದರು. ತಂದೆ- ತಾಯಿಯರ ಆಶೀರ್ವಾದದೊಂದಿಗೆ ರೇಣು ಅಧಿಕಾರ ಸ್ವೀಕರಿಸಿದರು.
ರೇಣು ಅವರು ಮುಖ್ಯ ಕಾರ್ಯದರ್ಶಿಗಳ ಸಿಬ್ಬಂದಿ ಅಧಿಕಾರಿ, ಪರಿಶಿಷ್ಟ ಪಂಗಡಗಳ ಸಚಿವಾಲಯದ ಸಹಾಯಕ ಕಾರ್ಯದರ್ಶಿ, ಉಪ ಕಲೆಕ್ಟರ್, ತ್ರಿಶೂರ್ ಮತ್ತು ದೇವಿಕುಳಂ ಗಳ ಸಹಾಯಕ ಕಲೆಕ್ಟರ್, ಎರ್ನಾಕುಳಂ ನಲ್ಲಿ ಸಬ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ರೇಣು ರಾಜ್ ಅವರ ತಂದೆ ರಾಜಕುಮಾರನ್ ನಾಯರ್ ಮತ್ತು ಅವರ ತಾಯಿ ವಿಎನ್ ಲತಾ.
ರೇಣು ಅಲಪ್ಪುಳ ಜಿಲ್ಲೆಯ ಎಂಟನೇ ಮಹಿಳಾ ಕಲೆಕ್ಟರ್ ಆಗಿದ್ದಾರೆ. ರೇಣು ರಾಜ್ ಅವರು ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿರುವುದರೊಂದಿಗೆ ರಾಜ್ಯದ ಹತ್ತು ಜಿಲ್ಲೆಗಳಿಗೆ ಮಹಿಳೆಯರೇ ಮುಖ್ಯಸ್ಥರಾಗಲಿದ್ದಾರೆ.
ತಿರುವನಂತಪುರಂನಲ್ಲಿ ನವಜ್ಯೋತ್ ಖೋಸಾ, ಕೊಲ್ಲಂ ಜಿಲ್ಲೆಯಲ್ಲಿ ಅಫ್ಜಾನಾ ಪರ್ವೀನ್ ಮತ್ತು ಪತ್ತನಂತಿಟ್ಟದಲ್ಲಿ ಡಾ.ದಿವ್ಯಾ ಎಸ್. ಅಯ್ಯರ್, ಇನ್ನು ಮುಂದೆ ಅಲಪ್ಪುಳದಲ್ಲಿ ಡಾ. ರೇಣು ರಾಜ್ ಮತ್ತು ಕೊಟ್ಟಾಯಂನಲ್ಲಿ ಡಾ.ಪಿ.ಕೆ. ಜಯಶ್ರೀ, ಇಡುಕ್ಕಿಯಲ್ಲಿ ಶೀಬಾ ಜಾರ್ಜ್ ಮತ್ತು ತ್ರಿಶೂರ್ ಜಿಲ್ಲೆಯಲ್ಲಿ ಹರಿತಾ ವಿ. ಕುಮಾರ್, ಪಾಲಕ್ಕಾಡ್ ಮೃಣ್ಮಯಿ ಜೋಶಿ, ವಯನಾಡ್ ಎಂ. ಗೀತಾ ಮತ್ತು ಕಾಸರಗೋಡು ಜಿಲ್ಲೆಯ ಭಂಡಾರಿ ಸ್ವಾಗತ್ ರಣವೀರ್‌ಚಂದ್ ಕೇರಳದ ಹತ್ತು ಜಿಲ್ಲೆಗಳಲ್ಲಿ ಮಹಿಳಾ ಜಿಲ್ಲಾಧಿಕಾರಿಗಳಾಗಿ ದೇಶದಲ್ಲೇ 75 ಶೇಕ್ಕಿಂತ ಹೆಚ್ಚಿನ ಮಹಿಳಾ ಪ್ರಾಬಲ್ಯದ ರಾಜ್ಯವಾಗಿ ಹೊರಹೊಮ್ಮಿದೆ.