ನವದೆಹಲಿ: ಭಾರತ-ಚೀನಾ ಸಂಬಂಧ ಸುಧಾರಣೆ ಕಾಣುವುದಕ್ಕೆ ಎಲ್ಎಸಿಯಲ್ಲಿ ಶಾಂತಿ ಮುಖ್ಯವಾದ ಅಂಶ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮೊರಿಸನ್ ಅವರೊಂದಿಗೆ ವರ್ಚ್ಯುಯಲ್ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಈಶಾನ್ಯ ಲಡಾಖ್ ಸ್ಥಿತಿಯ ಬಗ್ಗೆಯೂ ತಿಳಿಸಿದ್ದಾರೆ.
ಕಳೆದ 3 ದಿನಗಳಲ್ಲಿ ಚೀನಾದೊಂದಿಗಿನ ದ್ವಿಪಕ್ಷೀಯ ಸಂಬಂಧದ ಬಗ್ಗೆ ಎರಡನೇ ಬಾರಿಗೆ ಪ್ರಸ್ತಾಪಿಸಿದ್ದು, ಈಶಾನ್ಯ ಲಡಾಖ್ ನಲ್ಲಿ ಬಾಕಿ ಇರುವ ವಿಷಯಗಳು ಇತ್ಯರ್ಥವಾಗುವುದರ ಆಧಾರದಲ್ಲಿ ಚೀನಾದೊಂದಿಗಿನ ಸಂಬಂಧ ಅವಲಂಬಿಸಿರುತ್ತದೆ ಎಂದು ಭಾರತ ಈ ಹಿಂದೆ ಹೇಳಿತ್ತು.
ಆಸ್ಟ್ರೇಲಿಯಾ ಪ್ರಧಾನಿ- ಪ್ರಧಾನಿ ಮೋದಿ ದ್ವಿಪಕ್ಷೀಯ ಸಹಕಾರ, ಪ್ರಾದೇಶಿಕ ಭದ್ರತೆ, ಇಂಡೋ-ಪೆಸಿಫಿಕ್ ಹಾಗೂ ಉಕ್ರೇನ್ ಬಿಕ್ಕಟ್ಟು ಸೇರಿದಾಂತೆ ಹಲವು ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದಾರೆ.
ಆಸ್ಟ್ರೇಲಿಯಾದ ಜೊತೆಗಿನ ಶೃಂಗಸಭೆಗೂ ಮುನ್ನ ಶನಿವಾರ ದೆಹಲಿಯಲ್ಲಿ ನಡೆದ ಭಾರತ-ಜಪಾನ್ ನಡುವಿನ 14 ನೇ ಶೃಂಗಸಭೆಯಲ್ಲಿಯೂ ಭಾರತ ಚೀನಾಗೆ ಸಂಬಂಧಿಸಿದಂತೆ ಇದೇ ಅಭಿಪ್ರಾಯವನ್ನು ಮನದಟ್ಟು ಮಾಡಿತ್ತು.