HEALTH TIPS

ಬದಿಯಡ್ಕದಲ್ಲಿ ಎಂ.ಎಸ್ ಶೇಖರ್ ಸಂಸ್ಮರಣೆ

               ಬದಿಯಡ್ಕ:  ಸಾಹಿತಿ, ಸಂಘಟಕ, ಸಮಾಜ ಸುಧಾರಕ ಎಂ.ಎಸ್ ಶೇಖರ್ ಮುರಿಯಂಕೂಡ್ಲು ಅವರ 18ನೇ ವರ್ಷದ ಪುಣ್ಯದಿನಾಚರಣೆ-ಸಂಸ್ಮರಣೆ ಬದಿಯಡ್ಕ ಸಂಸ್ಕøತಿ ಭವನÀದಲ್ಲಿ ಜರಗಿತು.

              ಅಂಬೇಡ್ಕರ್ ವಿಚಾರ ವೇದಿಕೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ಗೌರವಾಧ್ಯಕ್ಷ ಚಂದ್ರಶೇಖರ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತಿ  ಅಧ್ಯಕ್ಷೆ ಶಾಂತಾ ಬಾರಡ್ಕ ಉದ್ಘಾಟಿಸಿದರು. ಶೇಖರ್‍ರವರ ಭಾವಚಿತ್ರಕ್ಕೆ ಅವರ ಸಹೋದರಿ ಸುಶೀಲ ಗಣೇಶ್ ಹಾರಾರ್ಪಣೆ ಗೈದರು. ವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ ಪ್ರಾಸ್ತಾವಿಕ ಮಾತುಗಳಲ್ಲಿ ಅಂಬೇಡ್ಕರ್ ವಿಚಾರ ವೇದಿಕೆಯ ಅಸ್ತಿತ್ವಕ್ಕೆ ಕಾರಣಕರ್ತರಾದ ಎಂ.ಎಸ್ ಶೇಖರ್ ಅವರನ್ನು ಸ್ಮರಿಸಿದರು. 


  ಕವಿ, ಪತ್ರಕರ್ತ, ಕೇರಳ ತುಳು ಅಕಾಡೆಮಿ ಸದಸ್ಯ ರಾಧಾಕೃಷ್ಣ. ಕೆ. ಉಳಿಯತ್ತಡ್ಕ ಸಂಸ್ಮರಣ ಭಾಷಣ ಮಾಡಿದರು. ಎಂ.ಎಸ್ ಶೇಖರ್ ಅವರು ಸಾಹಿತ್ಯ, ಸಂಘಟನೆ, ಅಂಬೇಡ್ಕರ್ ತತ್ವಾದರ್ಶಗಳನ್ನು ಪ್ರಚಾರ ಪಡಿಸುವಲ್ಲಿ ಆಯೋಜಿಸಿದ ಕಾರ್ಯವೈಖರಿಯ ಬಗ್ಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಎಂ.ಎಸ್ ಶೇಖರ್ ಅವರ ಕವಿತೆಗಳ ಗಾಯನ ಜರಗಿತು.

ಅಂಬೇಡ್ಕರ್ ವಿಚಾರ ವೇದಿಕೆಯ ಆಶ್ರಯದಲ್ಲಿ ಏರ್ಪಡಿಸಿದ ಎಂ.ಎಸ್ ಶೇಖರ್ ಸ್ಮರಣಾಥರ್À ಕವಿತಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆÀ ಕಾಸರಗೋಡು ಸÀರ್ಕಾರಿ ಕಾಲೇಜಿನ ಪ್ರಾಧ್ಯಾಪಿಕೆ ಡಾ.ಆಶಾಲತಾ ಚೇವಾರ್ ಬಹುಮಾನ ವಿತರಿಸಿದರು. ಪ್ರಥಮ ಬಹುಮಾನವನ್ನು ವಿರಾಜ್ ಅಡೂರು, ದ್ವಿತೀಯ ಬಹುಮಾನವನ್ನು ಟಿ.ವಿ.ಎನ್ ಖಂಡಿಗೆ, ತೃತೀಯ ಬಹುಮಾನವನ್ನು ಎ.ಬಿ. ದಿವಾಕರ ಬಲ್ಲಾಳ್ ಪಡೆದುಕೊಂಡರು. ಹತ್ತು ಮಂದಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಯಕ್ಷಗಾನ ಗುರು, ಎಂ.ಎಸ್ ಶೇಖರ್ ಅವರ ಸಹೋದ್ಯೋಗಿ ರಾಮ ಸಾಲ್ಯಾನ್ ಮಂಗಲ್ಪಾಡಿ ಭಾಗವಹಿಸಿದ್ದರು. ನಿವೃತ್ತ ಡೆಪ್ಯುಟಿ ತಹಶಿಲ್ದಾರ್ ಕೃಷ್ಣ ಡಿ. ಉಪಸ್ಥಿತರಿದ್ದರು. ಮದರು ಮಾಹಾಮತೆ ಮೊಗೇರ ಸಮಾಜದ ಅಧ್ಯಕ್ಷ ವಸಂತ ಅಜಕ್ಕೋಡು, ಮಹಿಳಾ ಘಟಕದ ಸಂಚಾಲಕಿ ಸುನಂದಾ ಟೀಚರ್ ಕುಂಬಳೆ, ವಿಜಯ ಕುಮಾರ್ ಬಾರಡ್ಕ ನುಡಿನಮನ ಸಲ್ಲಿಸಿದರು.

ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಸ್ವಾಗತಿಸಿ, ಸುಂದರ ಬಾರಡ್ಕ ವಂದಿಸಿದರು. ವನಜಾಕ್ಷಿ ಚೆಂಬ್ರಕಾನ ಕಾರ್ಯಕ್ರಮ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries