ಕಾಸರಗೋಡು: ಕೇರಳ ಯೋಗ ಅಸೋಶಿಯೇಶನ್ ನಡೆಸಿದ ಕೇರಳ ರಾಜ್ಯ ಮಟ್ಟದ ಯೋಗಾಸನÀದಲ್ಲಿ ಕಾಸರಗೋಡು ಕರಂದಕ್ಕಾಡ್‍ನ ಯೋಗ ಶಿಕ್ಷಕಿ ತೇಜಕುಮಾರಿ ಅವರು ನಡೆಸುತ್ತಿರುವ ಯೋಗ ಪೋರ್ ಕಿಡ್ಸ್ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ಸಹಿತ ಶಿಕ್ಷಕಿ ತೇಜ ಕುಮಾರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನಗರದ ಶ್ರೀ ಲಕ್ಷ್ಮೀವೆಂಕಟೇಶ ವಿದ್ಯಾಲಯದ 6 ನೇ ತರಗತಿ ವಿದ್ಯಾರ್ಥಿಗಳಾದ ಅಭಿಜ್ಞಾ ಮತ್ತು ಕೌಸ್ತುಬ್ ಕೆ.ಯು, ಚೈತನ್ಯ ವಿದ್ಯಾಲಯದ ಗನಶ್ಯಾಮ್ ಎನ್. ಮತ್ತು ಶಿಕ್ಷಕಿ ತೇಜಕುಮಾರಿ ಅವರು ಹರಿಯಾಣದ ಫರಿದಾಬಾದ್ ಸಹಪುರ್ ಆಶಾ ಜ್ಯೋತಿ ವಿದ್ಯಾಪೀಠದಲ್ಲಿ ಮಾ.25, 26 ಮತ್ತು 27 ರಂದು ನಡೆಯುವ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.