HEALTH TIPS

ಜೆಕ್​ ಗಣರಾಜ್ಯದಲ್ಲಿ ಸದ್ಗುರು; ಪ್ರೇಗ್​​ ತಲುಪಿತು ಮಣ್ಣು ರಕ್ಷಿಸಿ ಅಭಿಯಾನ

               ಪ್ರೇಗ್: ಈಶ ಫೌಂಡೇಷನ್​ ಸದ್ಗುರು ಅವರು ಮಣ್ಣಿನ ರಕ್ಷಣೆ ಸಲುವಾಗಿ ಹಮ್ಮಿಕೊಂಡಿರುವ ಮಣ್ಣು ರಕ್ಷಿಸಿ ಅಭಿಯಾನ ಇತ್ತೀಚೆಗಷ್ಟೇ ಲಂಡನ್​ನಲ್ಲಿ ಚಾಲನೆ ಪಡೆದಿದ್ದು, ಅಲ್ಲಿಂದ ಬರ್ಲಿನ್ ನಂತರ ಇದೀಗ ಜೆಕ್ ಗಣರಾಜ್ಯದ ಪ್ರೇಗ್ ತಲುಪಿದೆ.


                ಮಣ್ಣಿನ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸದ್ಗುರು ಅವರು 27 ರಾಷ್ಟ್ರಗಳಲ್ಲಿ 30 ಸಾವಿರ ಕಿ.ಮೀ. ದೂರ ಏಕಾಂಗಿ ಬೈಕ್​ ಯಾನ ಕೈಗೊಂಡಿದ್ದು, ಇದು ಮಾ.21ರಂದು ಲಂಡನ್​ನಿಂದ ಆರಂಭಗೊಂಡಿತ್ತು. ಇಂದು ಅವರು ಜೆಕ್​ ಗಣರಾಜ್ಯದ ಪ್ರೇಗ್​ಅನ್ನು ತಲುಪಿದ್ದು, ಅಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ರಾಯಭಾರಿ ಸದ್ಗುರು ಅವರಿಗೆ ಆತ್ಮೀಯ ಸ್ವಾಗತ ಕೋರಿದರು.

              ಈ ಸಂದರ್ಭದಲ್ಲಿ ಜೆಕ್ ಗಣರಾಜ್ಯದ ಡೆಪ್ಯುಟಿ ಆಫ್​ ಮಿನಿಸ್ಟರ್ ಆಫ್ ಎನ್ವಿರಾನ್​​ಮೆಂಟ್​ನ ಇವಾ ವೆಸೆಲ ಅವರನ್ನು ಭೇಟಿಯಾಗಿ ಮಾತನಾಡಿದ ಸದ್ಗುರು ತಮ್ಮ ಅಭಿಯಾನ ಉದ್ದೇಶದ ಜತೆಗೆ ಮಣ್ಣಿನ ರಕ್ಷಣೆಯ ಅನಿವಾರ್ಯತೆಯನ್ನೂ ವಿವರಿಸಿದರು. ಮಣ್ಣಿನ ಸಾವಯವ ಅಂಶವನ್ನು ಕನಿಷ್ಠ ಶೇ. 3-6ರಷ್ಟು ಉಳಿಸಿಕೊಳ್ಳುವುದು ಮಣ್ಣಿನ ರಕ್ಷಣೆಯಲ್ಲಿ ಮಹತ್ವವಾದುದು. ಅದಕ್ಕಾಗಿ 193 ರಾಷ್ಟ್ರಗಳಲ್ಲಿನ ರಾಷ್ಟ್ರೀಯ ನೀತಿಯಲ್ಲಿ ಬದಲಾವಣೆ ಅಗತ್ಯ ಎಂದು ವಿವರಿಸಿದ ಸದ್ಗುರು, ಇವಾ ವೆಸೆಲ ಅವರಿಗೆ ತಮ್ಮ ಗ್ಲೋಬಲ್ ಪಾಲಿಸಿ ಡ್ರಾಫ್ಟ್​ ಆಯಂಡ್​ ಸಲ್ಯೂಷನ್ಸ್​ ಹ್ಯಾಂಡ್​ಬುಕ್ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries