HEALTH TIPS

ರಾಷ್ಟ್ರಪತಿ ಚುನಾವಣೆ ಲೆಕ್ಕಾಚಾರದ ಸುತ್ತಮುತ್ತ..

                 ಜುಲೈನಲ್ಲಿ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಲೋಕಸಭೆ, ರಾಜ್ಯಸಭೆ, ವಿಧಾನಸಭೆಯ ಸದಸ್ಯರು ಮತ ಹಾಕಿ, ರಾಷ್ಟ್ರಪತಿಯನ್ನು ಚುನಾಯಿಸುತ್ತಾರೆ. ಇಲ್ಲಿ ಸಂಸದರು ಹಾಗೂ ರಾಜ್ಯಗಳ ಶಾಸಕರ ಮತಮೌಲ್ಯ ಬೇರೆಬೇರೆಯಾಗಿರುತ್ತದೆ.

                      ಈ ಪ್ರಕ್ರಿಯೆಯ ಸಮಗ್ರ ವಿವರ ಇಲ್ಲಿದೆ.

             ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಅಧಿಕಾರಾವಧಿ ಇದೇ ಜುಲೈನಲ್ಲಿ ಪೂರ್ಣಗೊಳ್ಳಲಿದೆ. ಇತ್ತೀಚೆಗೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿದು, ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ರಾಷ್ಟ್ರಪತಿ ಚುನಾವಣೆಯ ಸಮೀಕರಣಗಳೂ ಬದಲಾಗಿವೆ. ನೂತನ ರಾಷ್ಟ್ರಪತಿ ಆಯ್ಕೆ ಎಲೆಕ್ಟೋರಲ್ ಕಾಲೇಜ್ ಪದ್ಧತಿ ಮೂಲಕ ಆಗಲಿದೆ. ಅದರಲ್ಲಿ, ಸಂಸತ್ ಸದಸ್ಯರು ಮತ್ತು ಎಲ್ಲ ರಾಜ್ಯಗಳ ಶಾಸಕರು ಪಾಲ್ಗೊಳ್ಳಲಿದ್ದಾರೆ. ಉತ್ತರಪ್ರದೇಶ ಶಾಸಕರ ಮತಮೌಲ್ಯ 208 ಆಗಿದ್ದರೆ, ಗೋವಾ ಶಾಸಕರ ಮತಮೌಲ್ಯ 20. ಭಾರತದ ಒಟ್ಟು ಶಾಸಕರ ಮತಮೌಲ್ಯ 5,49,495. ಸಂಸದರು ಮತ್ತು ಶಾಸಕರ ಒಟ್ಟು ಮತಗಳು 10,98,903. ಆಡಳಿತಾರೂಢ ಎನ್​ಡಿಎ ಸಂಸದರು ಮತ್ತು ಶಾಸಕರು ಹೊಂದಿರುವ ಮತಮೌಲ್ಯ 5,39,827. ಶೇಕಡ 50ಕ್ಕಿಂತ ಸ್ವಲ್ಪ (9,625 ಮತಗಳು) ಕಡಿಮೆ.

ಮತಗಳ ಮೌಲ್ಯ ಅಳೆಯುವುದು ಹೇಗೆ?: ರಾಷ್ಟ್ರಪತಿ ಚುನಾವಣೆಯಲ್ಲಿ ಮತಚಲಾಯಿಸುವ ಪ್ರತಿಯೊಬ್ಬ ಸಂಸದ ಮತ್ತು ಶಾಸಕರ ಮತಗಳಿಗೆ ಮೌಲ್ಯ ನಿಗದಿಪಡಿಸಲಾಗಿರುತ್ತದೆ. ಮೌಲ್ಯ ನಿರ್ಧಾರದಲ್ಲಿ ರಾಜ್ಯದ ಜನಸಂಖ್ಯೆ ಮಹತ್ವದ ಪಾತ್ರವಹಿಸುತ್ತದೆ. ಮತಗಳ ಮೌಲ್ಯ ಅಳೆಯುವುದಕ್ಕೆ ಎರಡು ಬಗೆಯ ಸೂತ್ರವಿದೆ.

             ಶಾಸಕರು: ಇವರ ಮತದ ಮೌಲ್ಯ ಅಳೆಯುವುದಕ್ಕೆ ಎಲ್ಲ ಶಾಸಕರ ಸಂಖ್ಯೆಯನ್ನು 1000ದಿಂದ ಗುಣಿಸಲಾಗುತ್ತದೆ. ಇದನ್ನು ಆಯಾಯ ರಾಜ್ಯದಲ್ಲಿ 1971ರಲ್ಲಿದ್ದ ಒಟ್ಟು ಜನಸಂಖ್ಯೆಯಿಂದ ಭಾಗಿಸಲಾಗುತ್ತದೆ. ಉದಾಹರಣೆಗೆ ಮಧ್ಯಪ್ರದೇಶದಲ್ಲಿ ಶಾಸಕರ ಸಂಖ್ಯೆ 230 ಇದೆ. ಇದನ್ನು 1000ದಿಂದ ಗುಣಿಸಬೇಕು. ಇದರಿಂದ ಬಂದ ಉತ್ತರದಿಂದ 1971ರಲ್ಲಿ ಇಲ್ಲಿದ್ದ ಜನಸಂಖ್ಯೆ 30,017,180ರಿಂದ ಭಾಗಿಸಬೇಕು. ಆಗ 131 ಆಗುತ್ತದೆ. ಅಂದರೆ ಅಲ್ಲಿನ ಶಾಸಕರ ಮತದ ಮೌಲ್ಯ 131.

           ಸಂಸದರು: ಇವರ ಮತದ ಮೌಲ್ಯ ಅಳೆಯುವುದಕ್ಕೆ ಶಾಸಕರ ಒಟ್ಟು ಮತದ ಮೌಲ್ಯವನ್ನು ಸಂಸದರ ಸಂಖ್ಯೆಯಿಂದ ಭಾಗಿಸಲಾಗುತ್ತದೆ. ಅಂದರೆ ಶಾಸಕರ ಮತದ ಮೌಲ್ಯ 5,43,218ನ್ನು 776ರಿಂದ ಭಾಗಿಸಲಾಗುತ್ತದೆ. ಪ್ರತಿ ಸಂಸದರ ಮತದ ಮೌಲ್ಯ 708 ಆಗಿರುತ್ತದೆ. (776 ಸಂಸದರು*708). ಸಂಸದರ ಸಂಖ್ಯೆ ಮಧ್ಯದಲ್ಲಿ ಕಡಿಮೆಯಾದರೆ ಮತಮೌಲ್ಯ ಕಡಿಮೆಯಾಗುವುದಿಲ್ಲ.

            ಶಾಸಕರ ಮತಮೌಲ್ಯದಲ್ಲಿ ಎನ್​ಡಿಎ ಪಾಲು: ಈ ಕೆಳಕಂಡ ಪಟ್ಟಿಯು ಆಯಾ ರಾಜ್ಯಗಳ ಶಾಸಕರ ಒಟ್ಟು ಮತ ಮತ್ತು ಆ ಪೈಕಿ ಎನ್​ಡಿಎ ಹೊಂದಿರುವ ಮತಸಂಖ್ಯೆಯನ್ನು ನಮೂದಿಸಿದೆ. ಉದಾಹರಣೆಗೆ ಉತ್ತರಪ್ರದೇಶದಲ್ಲಿ ಎಲ್ಲ ಶಾಸಕರು ಮತ ಚಲಾಯಿಸಿದರೆ, ಒಟ್ಟು ಮತಗಳ ಸಂಖ್ಯೆ 83,824 ಆಗುತ್ತದೆ. ಈ ಪೈಕಿ ಎನ್​ಡಿಎ ಗಳಿಸುವ ಮತಗಳು 56,784.

            ರಾಷ್ಟ್ರಪತಿಯ ಅಧಿಕಾರವೇನು?: ಭಾರತದ ರಾಷ್ಟ್ರಪತಿಗೆ ಎಕ್ಸಿಕ್ಯುಟಿವ್ ಪವರ್ ನೀಡಲಾಗಿದೆ. ಹೀಗಿದ್ದರೂ, ಸಂಸತ್ತಿನಲ್ಲಿ ದೋಷಾರೋಪಣೆ(ಇಂಪೀಚ್​ವೆುಂಟ್) ಪ್ರಕ್ರಿಯೆಯಿಂದ ರಾಷ್ಟ್ರಪತಿಯನ್ನು ಕೆಳಗಿಳಿಸಲು ಸಾಧ್ಯವಿದೆ. ಆದರೆ ಸಂವಿಧಾನಕ್ಕೆ ವಿರೋಧವಾಗಿ ನಡೆದಾಗ ಮಾತ್ರವೇ ದೋಷಾರೋಪಣೆ ಮಾಡಬಹುದಾಗಿದೆ. ರಾಷ್ಟ್ರಪತಿ ನಿರ್ಧಾರದ ಮರುಪರಿಶೀಲನೆ ಸೂಚಿಸಬಹುದಾಗಿದೆ. ಆದರೆ ಎರಡನೆ ಬಾರಿಯೂ ತಪ್ಪೆಂದು ಸಹಮತಕ್ಕೆ ಬಂದಲ್ಲಿ ರಾಷ್ಟ್ರಪತಿ ಸ್ಥಾನ ತ್ಯಜಿಸಬೇಕಾಗುತ್ತದೆ.

  ನಾಮಪತ್ರ ಸಲ್ಲಿಸಲು          ಅರ್ಹತೆ: ಅಭ್ಯರ್ಥಿ ಭಾರತೀಯ ಆಗಿರಬೇಕು, 35 ವರ್ಷ ವಯಸ್ಸು ಪೂರ್ತಿಯಾಗಬೇಕು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ ಇನ್ನಾವುದೆ ಸ್ಥಳೀಯ ಸಂಸ್ಥೆಗಳ ಯಾವುದಾದರೂ ಲಾಭದಾಯಕ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವಂತಿಲ್ಲ. 1974ರ ನಿಯಮ ಪ್ರಕಾರ, ಕನಿಷ್ಠ 50 ಅನುಮೋದಕರು ಮತ್ತು ಕನಿಷ್ಠ 50 ಬೆಂಬಲಿಸುವವರ ಸಹಿಯೊಂದಿಗೆ ಫಾರಂ ನಂ. 2ನ್ನು ಭರ್ತಿ ಮಾಡಿ, ಖುದ್ದು ಚುನಾವಣಾಧಿಕಾರಿಗೆ ಸಲ್ಲಿಸಬೇಕು. ಇದೇ ಸಂದರ್ಭದಲ್ಲಿ ಭದ್ರತಾ ಠೇವಣಿಯಾಗಿ 15 ಸಾವಿರ ರೂಪಾಯಿ ಇಡಬೇಕು. ಈ ಠೇವಣಿಯನ್ನು ಅವರ ಹೆಸರಿನಲ್ಲಿ ಆರ್​ಬಿಐ ಅಥವಾ ಸರ್ಕಾರಿ ಖಜಾನೆಗೆ ಜಮಾ ಮಾಡಲಾಗುವುದು. ನಾಮಪತ್ರದ ಜತೆಗೆ ದೃಢೀಕೃತ ಮತದಾರರ ಗುರುತಿನ ಚೀಟಿಯ ಪ್ರತಿ ಲಗತ್ತಿಸಬೇಕು. ಒಂದು ಚುನಾವಣೆಯಲ್ಲಿ ಒಬ್ಬ ಮತದಾರ ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಯನ್ನು ಅನುಮೋದಿಸುವಂತಿಲ್ಲ.

            ಸಂವಿಧಾನದ 58ನೇ ಪರಿಚ್ಛೇದ ಪ್ರಕಾರ, ಹಾಲಿ ಉಪರಾಷ್ಟ್ರಪತಿ, ಯಾವುದೇ ರಾಜ್ಯದ ಗವರ್ನರ್ ಅಥವಾ ಸಚಿವರು ಸಹ ರಾಷ್ಟ್ರಪತಿಯಾಗಿ ಆಯ್ಕೆ ಆಗಬಹುದು. ಇವರು ಸ್ಪರ್ಧಿಸಬೇಕಾದರೆ, ತಾವಿರುವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. 1952ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಕಾಯಿದೆಯಲ್ಲಿ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

            ನಾಮಪತ್ರ ಸಲ್ಲಿಸಲು ಅರ್ಹತೆ: ಅಭ್ಯರ್ಥಿ ಭಾರತೀಯ ಆಗಿರಬೇಕು, 35 ವರ್ಷ ವಯಸ್ಸು ಪೂರ್ತಿಯಾಗಬೇಕು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ ಇನ್ನಾವುದೆ ಸ್ಥಳೀಯ ಸಂಸ್ಥೆಗಳ ಯಾವುದಾದರೂ ಲಾಭದಾಯಕ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವಂತಿಲ್ಲ. 1974ರ ನಿಯಮ ಪ್ರಕಾರ, ಕನಿಷ್ಠ 50 ಅನುಮೋದಕರು ಮತ್ತು ಕನಿಷ್ಠ 50 ಬೆಂಬಲಿಸುವವರ ಸಹಿಯೊಂದಿಗೆ ಫಾರಂ ನಂ. 2ನ್ನು ಭರ್ತಿ ಮಾಡಿ, ಖುದ್ದು ಚುನಾವಣಾಧಿಕಾರಿಗೆ ಸಲ್ಲಿಸಬೇಕು. ಇದೇ ಸಂದರ್ಭದಲ್ಲಿ ಭದ್ರತಾ ಠೇವಣಿಯಾಗಿ 15 ಸಾವಿರ ರೂಪಾಯಿ ಇಡಬೇಕು. ಈ ಠೇವಣಿಯನ್ನು ಅವರ ಹೆಸರಿನಲ್ಲಿ ಆರ್​ಬಿಐ ಅಥವಾ ಸರ್ಕಾರಿ ಖಜಾನೆಗೆ ಜಮಾ ಮಾಡಲಾಗುವುದು. ನಾಮಪತ್ರದ ಜತೆಗೆ ದೃಢೀಕೃತ ಮತದಾರರ ಗುರುತಿನ ಚೀಟಿಯ ಪ್ರತಿ ಲಗತ್ತಿಸಬೇಕು. ಒಂದು ಚುನಾವಣೆಯಲ್ಲಿ ಒಬ್ಬ ಮತದಾರ ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಯನ್ನು ಅನುಮೋದಿಸುವಂತಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad

ಜಾಹಿರಾತು

Qries