HEALTH TIPS

ಕಾಶ್ಮೀರ ಹತ್ಯಾಕಾಂಡದ ನ್ಯೆಜ ಅಭಿವ್ಯಕ್ತಿ: ಕಾಶ್ಮೀರದ ಇತಿಹಾಸ ಅನಾವರಣ: ಪ್ರತಿಭಟನೆ ನಡುವೆ ಕೇರಳದಲ್ಲಿ ಇನ್ನಷ್ಟು ಚಿತ್ರಮಂದಿರಗಳಲ್ಲಿ ಪ್ರದರ್ಶನ ಸಾಧ್ಯತೆ


       ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಇತ್ತೀಚಿನ ಚಿತ್ರ 'ದಿ ಕಾಶ್ಮೀರ್ ಫೈಲ್'  ಮೊನ್ನೆ ಥಿಯೇಟರ್‌ ನಲ್ಲಿ ಪ್ರದರ್ಶನ ಆರಂಭಿಸಿದೆ.  ಚಿತ್ರವು ಕಾಶ್ಮೀರಿ ಪಂಡಿತರ ನಿರ್ಗಮನದ ಕಥೆಯನ್ನು ಹೇಳುತ್ತದೆ.  ಚಿತ್ರವು ನೈಜ ಘಟನೆಗಳನ್ನು ಆಧರಿಸಿದೆ.  ಈಗ ಕೇರಳದಲ್ಲಿ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ.  ಚಿತ್ರಕ್ಕೆ ಸಾಕಷ್ಟು ಬೇಡಿಕೆ ಮತ್ತು ವೀಕ್ಷಕರಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
         ಕೇರಳದ ಥಿಯೇಟರ್‌ಗಳಲ್ಲಿ ಕಾಶ್ಮೀರಿ ಪಂಡಿತರ ಕುರಿತ ಚಿತ್ರ ಪ್ರದರ್ಶನದ ವಿರುದ್ಧ ಒಂದು ವರ್ಗದ ಜನರು ಪ್ರತಿಭಟಿಸುತ್ತಿದ್ದಾರೆ ಕೂಡಾ.  ಹಾಗಾಗಿ ಕೇರಳದಲ್ಲಿ ಎರಡು ಚಿತ್ರಮಂದಿರಗಳಲ್ಲಿ ಮಾತ್ರ ಪ್ರದರ್ಶನ ನೀಡಲಾಗಿದೆ.  ಕೊಚ್ಚಿ ಲುಲುವಿನ ಪಿವಿಆರ್‌ನಲ್ಲಿ ಎರಡು ಪ್ರದರ್ಶನಗಳು ಮತ್ತು ಕೋಝಿಕ್ಕೋಡ್ ಕ್ರೌನ್ ಥಿಯೇಟರ್‌ನಲ್ಲಿ ಒಂದು ಪ್ರದರ್ಶನ ನೀಡಲು ಅವಕಾಶ ನೀಡಲಾಗಿದೆ.  ಹೆಚ್ಚಿನ ಪ್ರದರ್ಶನಗಳಿಗೆ ಅವಕಾಶ ನೀಡುವಂತೆ ಒತ್ತಾಯಿಸಿ ಸಾಮಾಜಿಕ ಜಾಲತಾಣಗಳು ಸೇರಿದಂತೆ ಬಲವಾದ ಬೇಡಿಕೆ ವ್ಯಕ್ಯವಾದವು.
         ನಂತರ ಇನ್ನೂ ಎರಡು ಜಿಲ್ಲೆಗಳಲ್ಲಿ ಚಿತ್ರ ತೆರೆ ಕಾಣಲಿದೆ.  ಐನಾಕ್ಸ್ ಕ್ಲಾಸ್ ಥಿಯೇಟರ್, ಶೋಭಾ ಮಾಲ್, ತ್ರಿಶೂರ್ ಮತ್ತು ಏರೀಸ್ ಪ್ಲೆಕ್ಸ್ ಚಿತ್ರಮಂದಿರಗಳು, ತಿರುವನಂತಪುರಂನಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ.  ಮುಂದಿನ ದಿನಗಳಲ್ಲಿ ಚಿತ್ರ ಇನ್ನಷ್ಟು ಥಿಯೇಟರ್‌ಗಳಲ್ಲಿ ಬರುವ ನಿರೀಕ್ಷೆ ಇದೆ.  ಈ ಚಿತ್ರವು ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯವನ್ನು ತೆರೆದಿಡುತ್ತದೆ.  ಹಾಗಾಗಿ ಚಿತ್ರ ಹಲವೆಡೆ ಡಿ-ಗ್ರೇಡಿಂಗ್ ಎದುರಿಸಬೇಕಾಯಿತು.
        ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಚಿನ್ಮಯಿ ಮಾಂಡ್ಲೇಕರ್, ಪುನೀತ್ ಇಸ್ಸಾರ್, ಪ್ರಕಾಶ್ ಬೆಳವಾಡಿ, ಅತುಲ್ ಶ್ರೀವಾಸ್ತವ್ ಮತ್ತು ಮೃಣಾಲ್ ಕುಲಕರ್ಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.  1987ರ ನಂತರ ಕಾಶ್ಮೀರದಲ್ಲಿ ನಡೆದ ಗಲಭೆಗಳ ನಂತರ 400ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು ಹತರಾಗಿ 1990ರ ಅಂತ್ಯದ ವೇಳೆಗೆ 25,000ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು ರಾಜ್ಯವನ್ನು ತೊರೆಯಬೇಕಾಯಿತು ಎಂಬುದು ಇತಿಹಾಸ.  ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಚಿತ್ರವು ಗಲಭೆಗಳನ್ನು ಕಂಡವರ ಅನುಭವವನ್ನು ಆಧರಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries