ಕೊಚ್ಚಿ: ಹಿಜಾಬ್ ನಿಷೇಧದ ಬಗ್ಗೆ ಮಾಜಿ ಆರೋಗ್ಯ ಸಚಿವೆ ಕೆಕೆ ಶೈಲಜಾ ಪ್ರತಿಕ್ರಿಯಿಸಿದ್ದಾರೆ. ಹಿಜಾಬ್ ಹೊದಿಕೆಯಡಿಯಲ್ಲಿ ಇಡೀ ಮುಖವನ್ನು ಮುಚ್ಚಿ ಶಾಲಾ ಶಿಕ್ಷಣ ಪಡೆಯುವಂತೆ ಮಕ್ಕಳನ್ನು ಒತ್ತಾಯಿಸುವುದು ಸ್ವೀಕಾರಾರ್ಹವಲ್ಲ ಎಂದು ಶೈಲಜಾ ಹೇಳಿದರು. ಶಿರೋವಸ್ತ್ರಗಳು ಕೆಲವರ ಸಂಪ್ರದಾಯವಾಗಿದೆ ಮತ್ತು ಪಂಜಾಬಿ ಮಕ್ಕಳು ಅದರ ಭಾಗವಾಗಿ ತಲೆಗೆ ಸ್ಕಾರ್ಫ್ ಧರಿಸುತ್ತಾರೆ. ಹಾಗೆಂದು ಸಾರ್ವಜನಿಕವಾಗಿ ಅದೆಲ್ಲ ಈ ಕಾಲಕ್ಕೆ ಸೂಕ್ತವಾದುದಲ್ಲ. ಒತ್ತಡದ ಮೂಲಕ ಧಾರ್ಮಿಕ, ಸಾಮುದಾಯಿಕ ಆಚರಣೆಗಳು ಈ ಕಾಲಕ್ಕೆ ಹೊಂದುವಂತದ್ದಲ್ಲ ಎಂದಿರುವರು.
ಇಸ್ಲಾಂ ಕೇವಲ ತಲೆ ಮುಚ್ಚಿಕೊಳ್ಳುವಂತೆ ಹೇಳುತ್ತದೆ. ಆದರೆ ಮಕ್ಕಳು ಮುಖ ಮುಚ್ಚಿಕೊಂಡು ತರಗತಿಯಲ್ಲಿ ಕುಳಿತುಕೊಳ್ಳಬೇಕು ಎಂದು ಒತ್ತಾಯಿಸುವುದು ಸರಿಯಲ್ಲ. ಮುಸ್ಲಿಂ ಹುಡುಗಿಯರು ಸುಂದರವಾಗಿ ತರಗತಿಗೆ ಬರುತ್ತಾರೆ. ಇಷ್ಟು ಸಾಕು. ಇದಕ್ಕೆ ವ್ಯತಿರಿಕ್ತವಾಗಿ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳಬೇಕು ಎಂದು ಹಠ ಮಾಡುವುದು ಸರಿಯಲ್ಲ, ಇದೊಂದು ಉಗ್ರಗಾಮಿ, ಮನಸ್ಸಾಗಿದ್ದು ನಿವಾರಿಸಬೇಕು' ಎಂದು ಕೆ.ಕೆ.ಶೈಲಜಾ ಹೇಳಿದರು.
ನಮ್ಮಲ್ಲಿ ಅಪೂರ್ವ ವಿಷಯಗಳನ್ನು ಒತ್ತಾಯಿಸುವುದು ಸ್ವೀಕಾರಾರ್ಹವಲ್ಲ. ಕೇರಳ ಸಂಸ್ಕøತಿಯನ್ನು ನಾಶಪಡಿಸುವ ರೀತಿಯಲ್ಲಿ ಎಲ್ಲೋ ಕಾಣುವ ಆಮೂಲಾಗ್ರ ಧೋರಣೆಗೆ ನಾವು ಹೋಗಲು ಬಿಡುವುದಿಲ್ಲ. ನಾವು ಯಾವುದೇ ತೀವ್ರವಾದ ವರ್ತನೆಯನ್ನು ಒಪ್ಪಿಕೊಳ್ಳಬೇಕಾಗಿಲ್ಲ. "ಶಾಲಾ ಸಮವಸ್ತ್ರದ ವಿಷಯಕ್ಕೆ ಬಂದಾಗ ಅವರು ಅದನ್ನು ಅರ್ಥಮಾಡಿಕೊಳ್ಳಬೇಕು" ಎಂದು ಅವರು ಹೇಳಿದರು.