ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನ ಅಂತಾರಾಷ್ಟ್ರೀಯ ಸಂಬಂಧ ಮತ್ತು ರಾಜಕೀಯ ವಿಭಾಗದ ಡಾ. ಕೆ. ಜಯಪ್ರಸಾದ್ ಅವರನ್ನು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‍ನ ಸ್ವತಂತ್ರ ನಿರ್ದೇಶಕರಾಗಿ ಭಾರತದ ರಾಷ್ಟ್ರಪತಿ ನೇಮಕ ಮಾಡಿದ್ದಾರೆ. ನೇಮಕಾತಿ ಮೂರು ವರ್ಷಗಳ ಕಾಲಾವಧಿಯಾಗಿರುತ್ತದೆ. ವಿಶ್ವ ವಿದ್ಯಾಳಯದ ಮಾಜಿ ಪೆÇ್ರ ವೈಸ್ ಚಾನ್ಸೆಲರ್ ಮತ್ತು ಮಾಜಿ ಹಣಕಾಸು ಅಧಿಕಾರಿಯಾಗಿದ್ದಇವರು ವಿಭಾಗದ ಮುಖ್ಯಸ್ಥರಾಗಿ, ಸ್ಕೂಲ್ ಆಫ್ ಗ್ಲೋಬಲ್ ಸ್ಟಡೀಸ್‍ನ ಡೀನ್ ಮತ್ತು ಆಡಳಿತ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.