ನವದೆಹಲಿ: ಗಿರ್ ಹಾಗೂ ಗಿರ್ನಾರ್ ಅಭಯಾರಣ್ಯಗಳ ಪ್ರದೇಶದಲ್ಲಿ ಜಿಯೋ ಟವರ್ ಸ್ಥಾಪನೆ ಮಾಡುವ ಯೋಜನೆಯನ್ನು ಸಂಸ್ಥೆ ಹಿಂಪಡೆದಿದೆ ಎಂದು ಸಂಸತ್ ಗೆ ಸರ್ಕಾರ ಮಾಹಿತಿ ನೀಡಿದೆ.
ಗುಜರಾತ್ ಸರ್ಕಾರ ನೀಡಿದ್ದ ಮಾಹಿತಿಯ ಪ್ರಕಾರ ರಿಲಾಯನ್ಸ್ ಜಿಯೋ ಇನ್ಫೋಕಾಮ್ ಸಂಸ್ಥೆ ಗಿರ್ ಹಾಗೂ ಗಿರ್ನಾರ್ ವನ್ಯಜೀವಿ ಅಭಯಾರಣ್ಯದಲ್ಲಿ 41 ಮೊಬೈಲ್ ಟವರ್ ಗಳನ್ನು ಸ್ಥಾಪಿಸುವ ಪ್ರಸ್ತಾವನೆ ಸಲ್ಲಿಸಿತ್ತು.
ಈ ಬಗ್ಗೆ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸಂವಹನ ಖಾತೆ ಸಚಿವ ದೇವುಸಿಂಹ ಚೌಹಾಣ್, ಗುಜರಾತ್ ಸರ್ಕಾರಕ್ಕೆ ನೀಡಲಾಗಿರುವ ಮಾಹಿತಿಯ ಪ್ರಕಾರ, ಗಿರ್ ಹಾಗೂ ಗಿರ್ನಾರ್ ಅಭಯಾರಣ್ಯಗಳ ಪ್ರದೇಶದಲ್ಲಿ ಜಿಯೋ ಟವರ್ ಸ್ಥಾಪನೆ ಮಾಡುವ ಯೋಜನೆಯನ್ನು ಸಂಸ್ಥೆ ಹಿಂಪಡೆದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ವನ್ಯಜೀವಿಗಳಿಂದ ಕೂಡಿರುವ ಪ್ರದೇಶದಲ್ಲಿ ಮೊಬೈಲ್ ಟವರ್ ಗಳನ್ನು ಹಾಕುವುದಕ್ಕೆ 2017 ರಲ್ಲಿ ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಸಚಿವಾಲಯದಿಂದ ಯಾವುದೇ ಸಲಹೆಗಳೂ ಬಂದಿಲ್ಲ ಎಂದು ಪಿಟಿಐಗೆ ಮಾಹಿತಿ ನೀಡಲಾಗಿದೆ.