ಉಪ್ಪಳ ; ಕೇರಳ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ರಾಜ್ಯದ ಸರ್ವ ಶಾಲೆಗಳ ಅಂತರ್ಜಾಲ ಮಾಹಿತಿ ಕೋಶ " ಸ್ಕೂಲ್ ವಿಕಿ "ಯ ಭಾಗವಾಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾ ಸಂಸ್ಥೆಗೆ ಖ್ಯಾತಿಯನ್ನು ತಂದಿತ್ತ ಸಾಧಕ ಪೂರ್ವ ವಿದ್ಯಾರ್ಥಿಗಳು, ನಿವೃತ್ತ ಮುಖ್ಯ ಶಿಕ್ಷಕರು, ಪ್ರಸಕ್ತ ವರ್ಷದ ಶಾಲಾ ಚಟುವಟಿಕೆಗಳು ಶಾಲಾ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ, ಮಾಹಿತಿಯನ್ನು ಒಳಗೊಂಡ "ಸ್ಕೂಲ್ ವಿಕಿ" ಯನ್ನು ಇತ್ತೀಚೆಗೆ ಮಂಗಲ್ಪಾಡಿ ಪಂಚಾಯತಿ ಅಧ್ಯಕ್ಷೆ ರಿಸಾನಾ ಅವರು ಬಿಡುಗಡೆಗೊಳಿಸಿದರು.
ಗ್ರಾಮ ಪಂಚಾಯತಿ ಸದಸ್ಯರಾದ ಶರೀಫ್ ಟಿ ಎಂ, ಬಿಫಾತಿಮ ಹಾಗೂ ಮಂಜೇಶ್ವರ ಬಿ ಆರ್ ಸಿ ಯ ಯೋಜನಾ ಸಂಯೋಜಕ ವಿಜಯಕುಮಾರ್ ಪಾವಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದು, ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಐಟಿ ಪರಿಣತ ಶಿಕ್ಷಕ ಅಬ್ದುಲ್ ಬಶೀರ್ " ಸ್ಕೂಲ್ ವಿಕಿ "ಯ ಬಗ್ಗೆ ಮಾಹಿತಿ ನೀಡಿದರು.