ಕಾಸರಗೋಡು: ಲಿಂಗ ಸಮತ್ವ ಮತ್ತು ಸುಸ್ಥಿರ ಅಭಿವೃದ್ಧಿ ಎಂಬುದು ತಕ್ಷಣಕ್ಕೆ ಜಾರಿಯಾಗುವ ವ್ಯವಸ್ಥೆಯಲ್ಲ. ಬದಲಾಗಿ ನಿರಂತರ ಪ್ರಕ್ರಿಯೆಯಾಗಿರುವುದಾಗಿ ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದ್ದಾರೆ. ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರಸಭಾಂಗಣದಲ್ಲಿ ನಡೆದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಸಿ.ಎ ಬಿಂದು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ 'ಉಜ್ಚಲ ಬಾಲ್ಯ-2020'ಕ್ಕೆ ಅರ್ಹರಾದ ವಿ.ನೀಲಾ, ಸಿನಾಷ ಅವರನ್ನು 25ಸಾವಿರ ರೂ. ನಗದು, ಸ್ಮರಣಿಕೆ ಹಾಗೂ ಸನ್ಮಾನಪತ್ರ ನೀಡಿ ಜಿಲ್ಲಾಧಿಕಾರಿ ಗೌರವಿಸಿದರು. ಉತ್ತಮ ಸಾಧನೆ ತೋರಿದ 12ಮಂದಿ ಮಹಿಳೆಯರನ್ನು ಈ ಸಂದರ್ಭ ಅಭಿನಂದಿಸಲಾಯಿತು. ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಕೆ.ವಿ ಉಷ್ಪಾ, ಜಿಲ್ಲಾ ವಾರ್ತಾ ಮತ್ತು ಮಾಹಿತಿ ಅಧಿಕಾರಿ ಎಂ. ಮಧುಸೂಧನನ್, ಜಿಲ್ಲಾ ಸಾಮಾಜಿಕ ನೀತಿ ಅಧಿಕಾರಿ ಶೀಬಾ ಮುಮ್ತಾಸ್, ಐಸಿಡಿಎಸ್ ಜಿಲ್ಲಾ ಯೋಜನಾಧಿಕಾರಿ ಬೀನಮ್ಮ ಜೇಕಬ್ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭ ವರದಕ್ಷಿಣೆ ವಿರುದ್ಧ ಅಭಿಯಾನದ ಅಂಗವಾಗಿ ಕಾಸರಗೋಡು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಅಧೀನದಲ್ಲಿ ತಯಾರಿಸಿದ ಯಕ್ಷಗಾನ ಬಯಲಾಟದ ವಿಡಿಯೋ ಬಿಡುಗಡೆಗೊಳಿಸಲಾಯಿತು.