ವಾಷಿಂಗ್ ಟನ್: ರಷ್ಯಾದಿಂದ ತೀವ್ರವಾಗಿ ದಾಳಿಗೆ ಒಳಗಾಗುತ್ತಿರುವ ಉಕ್ರೇನ್ ಯುದ್ಧಭೂಮಿಯಲ್ಲಿನ ಆವೇಗವನ್ನು ಬದಲಾಯಿಸತೊಡಗಿದ್ದು ಆಕ್ರಮಣಕಾರರಿಂದ ಕೆಲವು ಪ್ರದೇಶಗಳನ್ನು ವಾಪಸ್ ಪಡೆಯುವುದಕ್ಕೆ ಮುಂದಾಗಿದೆ ಎಂದು ಪೆಂಟಗನ್ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.
ಮಾಸ್ಕೋದ ವಿವೇಚನೆಯಿಲ್ಲದ ದಾಳಿಗಳು ಉಕ್ರೇನ್ ನ ಹಲವು ನಗರಗಳನ್ನು ಧ್ವಂಸ ಮಾಡಿದ್ದು, 10 ಮಿಲಿಯನ್ ಗೂ ಹೆಚ್ಚಿನ ಮಂದಿ ಉಕ್ರೇನ್ ತೊರೆದು ಹೋಗಿದ್ದಾರೆ.
ಉಕ್ರೇನ್ ರಷ್ಯಾಗೆ ಪ್ರತಿರೋಧ ತೋರುತ್ತಿದ್ದು, ಪಶ್ಚಿಮದ ಸೇನಾ ಸಹಾಯ ಪಡೆದು ಉಕ್ರೇನ್ ಅನಿರೀಕ್ಷಿತವಾಗಿ ಉಗ್ರ ಪ್ರತಿದಾಳಿಗೆ ಮುಂದಾಗಿದೆ ಎಂದು ಪೆಂಟಗನ್ ವಕ್ತಾರ ಜಾನ್ ಕಿರ್ಬೇ ಹೇಳಿದ್ದಾರೆ.
ಉಕ್ರೇನ್ ನವರು ರಷ್ಯನ್ನರು ಆಕ್ರಮಿಸಿಕೊಂಡಿರುವ ಪ್ರದೇಶದಿಂದ ಅವರನ್ನು ಹೊರದೂಡುತ್ತಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಪ್ರಮುಖವಾಗಿ ಮೈಕೊಲೈವ್ ನಲ್ಲಿ ಹೆಚ್ಚಾಗುತ್ತಿದೆ ಎಂದು ಪೆಂಟಗನ್ ವಕ್ತಾರರು ತಿಳಿಸಿದ್ದಾರೆ.