ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ಮುಷ್ಕರ ಸಂಪೂರ್ಣ ಯಶಸ್ವಿಯಾಗುತ್ತಿದೆ. ಮುಷ್ಕರದ ಅಂಗವಾಗಿ ಹೊಸ ಬಸ್ ನಿಲ್ದಾಣದಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ನಗರದಲ್ಲಿ ಬಾಯಿ ಮುಚ್ಚಿ ಮೆರವಣಿಗೆ ನಡೆಸಿದರು. ಧರಣಿ ಹಾಗೂ ಮೆರವಣಿಗೆಯಲ್ಲಿ ಬಸ್ ಮಾಲೀಕರು, ಕಾರ್ಮಿಕರು ಪಾಲ್ಗೊಂಡಿದ್ದರು. ಮುಷ್ಕರ ಯಶಸ್ವಿಯಾಗುವವರೆಗೆ ತೀವ್ರವಾಗಿ ಮುನ್ನಡೆಯಲು ನಿರ್ಧರಿಸಲಾಯಿತು. ಕೆ. ಗಿರೀಶ್, ಸಿ.ಎ. ಮುಹಮ್ಮದ್ ಕುಂಞÂ್ಞ, ಸಲೀಂ ಸರ್ವ, ಮುಹಮ್ಮದ್ ಕುಂಞÂ್ಞ, ಇಬ್ರಾಹಿಂ ನೇತೃತ್ವ ವಹಿಸಿದ್ದರು.