ಹೇಗ್: ನೆದಲೆರ್ಂಡ್ ನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ರμÁ್ಯ ಹಾಗೂ ಉಕ್ರೇನ್ ಯುದ್ಧದ ಕುರಿತು ವಿಚಾರಣೆ ಆರಂಭವಾಗಿದೆ. ಎರಡು ದಿನಗಳ ಕಾಲ ವಿಚಾರಣೆ ನಡೆಯಲಿದ್ದು, ಸೋಮವಾರ ಉಕ್ರೇನ್ ತನ್ನ ವಾದ ಮಂಡಿಸಿದರೆ, ನಾಳೆ ರμÁ್ಯ ತನ್ನ ಪ್ರತಿಕ್ರಿಯೆ ನೀಡಲಿದೆ.
ಫೆಬ್ರವರಿ 27 ರಂದು ಉಕ್ರೇನ್ ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯದಲ್ಲಿ(Iಅಎ) ರμÁ್ಯದ ವಿರುದ್ಧ ಮೊಕದ್ದಮೆ ಹೂಡಿದ್ದು, ಪುಟಿನ್ ಆಕ್ರಮಣವನ್ನು ತಕ್ಷಣ ನಿಲ್ಲಿಸಲು ಅಗತ್ಯವಿರುವ ತುರ್ತು ತೀರ್ಪನ್ನು ನೀಡುವಂತೆ ಉಕ್ರೇನ್ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.
ಪೂರ್ವ ಉಕ್ರೇನ್‍ನ ಡಾನ್‍ಬಾಸ್ ಪ್ರದೇಶದಲ್ಲಿ ಉಕ್ರೇನ್ ನರಮೇಧ ನಡೆಸಿದೆ. ಉಕ್ರೇನ್ ನ ಈ ದಾಳಿಯನ್ನು ಕೊನೆಗೊಳಿಸಲು ಆಕ್ರಮಣ ಅಗತ್ಯ ಎಂದು ರμÁ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿಕೆ ನೀಡಿದ್ದರು.
ಈ ಮಧ್ಯೆ, ನರಮೇಧವನ್ನು ತಪ್ಪಿಸಲು ನೆರೆಯ ರಾಷ್ಟ್ರದ ಮೇಲೆ ಆಕ್ರಮಣ ಮಾಡಿದೆ ಎಂಬ ಮಾಸ್ಕೋದ ವಾದವನ್ನು ಉಕ್ರೇನ್ ತಿರಸ್ಕರಿಸಿದೆ. ಅಲ್ಲದೆ, ರμÁ್ಯದ ಮಿಲಿಟರಿ ಕ್ರಮಗಳನ್ನು ತಕ್ಷಣವೇ ನಿಲ್ಲಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಉಕ್ರೇನ್ ಮನವಿ ಮಾಡಿಕೊಂಡಿದೆ.
ಉಕ್ರೇನ್ ತನ್ನ ವಾದವನ್ನು ಮಂಡಿಸುವುದರೊಂದಿಗೆ ಐಸಿಜೆ ಇಂದು ವಿಚಾರಣೆಯನ್ನು ಪ್ರಾರಂಭಿಸಿದೆ. ರμÁ್ಯ ಮಂಗಳವಾರ ಇದಕ್ಕೆ ಪ್ರತಿಕ್ರಿಯೆ ನೀಡಲಿದೆ. ಐಸಿಜೆನ ತೀರ್ಪುಗಳು ಸಾಮಾನ್ಯವಾಗಿ ಬದ್ಧವಾಗಿರುತ್ತವೆ ಮತ್ತು ವಿಶ್ವದ ರಾಷ್ಟ್ರಗಳು ಅನುಸರಿಸಿಕೊಂಡು ಬಂದಿವೆ. ಆದರೆ, ಕೋರ್ಟ್ ನ ತೀರ್ಪನ್ನು ಜಾರಿಗೊಳಿಸಲು ನೇರವಾದ ಮಾರ್ಗಗಳಿಲ್ಲ. ಕಳೆದ ವಾರ, ಇಂಟನ್ರ್ಯಾಷನಲ್ ಅಸೋಸಿಯೇಶನ್ ಆಫ್ ಜೆನೊಸೈಡ್ ಸ್ಕಾಲರ್ಸ್‍ನ ಕಾರ್ಯಕಾರಿ ಮಂಡಳಿಯು ಪುಟಿನ್ “ಜನಾಂಗೀಯ ಹತ್ಯೆ” ಎಂಬ ಪದವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡಿತ್ತು.
ಎರಡೂ ದೇಶಗಳ ಮಧ್ಯೆ ಸಹಿ ಮಾಡಲಾಗಿರುವ 1948ರ ನರಮೇಧವನ್ನು ತಡೆಗಟ್ಟುವ ಒಪ್ಪಂದವು ಐಸಿಜೆಯಲ್ಲಿ ಕೇಂದ್ರಿಕೃತವಾಗಿದೆ. ಈ ಮಧ್ಯೆ “ಉಕ್ರೇನ್‍ನಲ್ಲಿ ನರಮೇಧ ನಡೆಯುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ” ಎಂದು ಇಂಟನ್ರ್ಯಾಷನಲ್ ಅಸೋಸಿಯೇಶನ್ ಆಫ್ ಜಿನೋಸೈಡ್ ಸ್ಕಾಲರ್ಸ್‍ನ ಕಾರ್ಯಕಾರಿ ಮಂಡಳಿಯ ಅಧ್ಯಕ್ಷೆ ಮೆಲಾನಿ ಒ’ಬ್ರೇನ್ ಹೇಳಿದ್ದಾರೆ.