ಪೆರ್ಲ: ಕೃಷಿ ವಲಯದ ಉತ್ತೇಜನ ಹಾಗೂ ಕೃಷಿ ಸಂಬಂಧಿ ಉದ್ದಿಮೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರೋಯಲ್ ಟ್ರಾವಂಕೂರ್ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪೆನಿ ಚಟುವಟಿಕೆ ನಡೆಸಲಿರುವುದಾಗಿ ಸಂಸ್ಥೆ ವ್ಯವಸ್ಥಾಪಕ ರಾಹುಲ್ ಚಕ್ರಪಾಣಿ ತಿಳಿಸಿದ್ದಾರೆ.
ಅವರು ಸೋಮವಾರ ಸಂಸ್ಥೆಯ 27ನೇ ಶಾಖೆಯನ್ನು ಪೆರ್ಲದಲ್ಲಿ ಉದ್ಘಾಟಿಸಿ ಮಾತನಾಡಿದರು. ಕಾಸರಗೋಡು ಜಿಲ್ಲೆಯಲ್ಲಿ 15ಶಾಖೆ ತೆರೆಯುವ ಗುರಿಯಿರಿಸಲಾಗಿದ್ದು, 10ನೇ ಶಾಖೆ ಇದಾಗಿದೆ ಎಂದು ತಿಳಿಸಿದರು. ಸಂಸ್ಥೆಯ ವಲಯ ಪ್ರಬಂಧಕ ದೀಪುಮೋನ್ ಜೋಸ್ ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ ಜೆ.ಎಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷೆ ಡಾ. ಫಾತಿಮತ್ ಜುಹನಾಜ್, ಕೇರಳ ವ್ಯಾಪಾರಿ ವಯವಸಾಯಿ ಏಕೋಪನಾ ಸಮಿತಿ ಪೆಲರ್ಕ ಘಟಕ ಕಾರ್ಯದರ್ಶಿ ಗಣೇಶ್ ಪ್ರಸಾದ್, ಹಿರಿಯ ಸಹಕಾರಿ ಕೆ. ಶಂಕರನಾರಾಯಣ ಭಟ್, ಪ್ರಗತಿಪರ ಕೃಷಿಕ, ಶಿಕ್ಷಕ ಶ್ರೀಧರ ಮಾಸ್ಟರ್ ಕುಕ್ಕಿಲ, ಜಿತಿನ್ ರವೀಂದ್ರನ್ ಟಿ, ಶಿಂಟೋ ಜೋಸ್ ಉಪಸ್ಥಿತರಿದ್ದರು. ಪೆರ್ಲ ಶಾಖೆ ಸಿಬ್ಬಂದಿ ಅಕ್ಷಿತಾ ಸ್ವಾಗತಿಸಿದರು. ಶಾಖೆ ಉಪ ಪ್ರಬಂಧಕ ಪ್ರದೀಪ್ ವಂದಿಸಿದರು.