ಸಮರಸ ಚಿತ್ರಸುದ್ದಿ: ಮಂಜೇಶ್ವರ: ತಾಡ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಹೇರೂರು ದೇಗುಲದ ವಾರ್ಷಿಕ ಜಾತ್ರಾ ಮಹೋತ್ಸವ ಸಲುವಾಗಿ 'ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು' ತಂಡದಿಂದ ಶ್ರೀ ರಾಮದರ್ಶನ ಯಕ್ಷಗಾನ ತಾಳಮದ್ದಳೆ ಇತ್ತೀಚೆಗೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರು ಶ್ರೀ ರಾಮಪ್ರಸಾದ ಮಯ್ಯ ಕೂಡ್ಲು, ಚೆಂಡೆ ಮದ್ದಳೆಯಲ್ಲಿ ಸುಬ್ರಹ್ಮಣ್ಯ ಚಿತ್ರಾಪುರ, ಅನಿರುದ್ಧ ಅತ್ತಾವರ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಶ್ರೀಕೃಷ್ಣನಾಗಿ ಯೋಗೀಶ ರಾವ್ ಚಿಗುರುಪಾದೆ, ಬಲರಾಮ ರಾಜಾರಾಮ ರಾವ್ ಮೀಯಪದವು, ನಾರದನಾಗಿ ವೇ|ಮೂ| ಗಣೇಶ ನಾವಡ ಮೀಯಪದವು, ಹನುಮಂತ ಗುರುರಾಜ ಹೊಳ್ಳ ಬಾಯಾರು, ಗರುಡನ ಪಾತ್ರದಲ್ಲಿ ಅವಿನಾಶ ಹೊಳ್ಳ ವರ್ಕಾಡಿ, ಭಾಗವಹಿಸಿದ್ದರು.