ಸಮರಸ ಚಿತ್ರಸುದ್ದಿ: ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ನಡೆದುಬರುತ್ತಿರುವ ಕಣ್ಣೂರು ವಿಶ್ವವಿದ್ಯಾನಿಲಯ ಯೂನಿಯನ್ ಕಲೋತ್ಸವದ ಅಂಗವಾಗಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ಕಾಸರಗೋಡು ಸರ್ಕಾರಿ ಕಾಲೇಜು ಯಕ್ಷಗಾನ ತಂಡ 'ಎ'ಶ್ರೇಣಿಯೊಂದಿಗೆ ಪ್ರಥಮ ಸ್ಥಾನ ಗಳಿಸಿದೆ.
ಸರ್ಕಾರಿ ಕಾಲೇಜು ತಂಡ ಪ್ರದರ್ಶಿಸಿದ ತರಣಿಸೇನ ಕಾಳಗ ಪ್ರಸಂಗ ತೀರ್ಪುಗಾರರ ಪ್ರಶಂಸೆಗೆ ಕಾರಣವಾಯಿತು.
ಪಾತ್ರವರ್ಗದಲ್ಲಿ ವಸಂತ ಕುಮಾರ್ ಪರ್ತಾಜೆ(ರಾಮ), ರೋಹಿತ್ ಕೆ ಪೆರ್ಲ(ಲಕ್ಷ್ಮಣ), ಶರ್ಮಿಳಾ ಸಿ ಡಿ ಅಡ್ವಳ(ವಿಭೀಷಣ),ಹೃಷಿಕೇಶ ಎ ಅರ್ ಅಡೂರು(ಹನೂಮಂತ),ಅರುಣ ಕುಮಾರ್ ಕಾಟುಕುಕ್ಕೆ(ರಾವಣ),ಶ್ರೀವಿದ್ಯಾ ಎಸ್ ನೀರಾಳ(ರಾವಣ),ಚೈತ್ರ ಪಿ ಜಿ, ಬೆದ್ರಡ್ಕ(ಸರಮೆ),ದೀಕ್ಷಿತ್ ಕುಮಾರ್ ಕೆ ಕಿನ್ನಿಂಗಾರು(ಸುಪಾರ್ಶ್ವಕ),ವಿಖ್ಯಾತ್ ಸಿ ಎ ಚಿಪ್ಪಾರು(ದೂತ)ಪಾತ್ರಗಳನ್ನು ನಿರ್ವಹಿಸಿದರು.
ಹಿಮ್ಮೇಳದಲ್ಲಿ ಭಾಗವತರು : ಸತೀಶ್ ಪುಣಿಂಚತ್ತಾಯ ಪೆರ್ಲ,ಚೆಂಡೆ: ಅಂಬೆಮೂಲೆ ಶಿವಶಂಕರ ಭಟ್ ಹಾಗೂ ಮದ್ದಳೆ : ಆದಿತ್ಯ ಬರೆಕರೆ ಸಹಕರಿಸಿದರು.
ನಾಟ್ಯಗುರು ದಿವಾಣ ಶಿವಶಂಕರ ಭಟ್ ಅವರ ಮಾರ್ಗದರ್ಶನದಲ್ಲಿ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಅವರ ನೇತೃತ್ವದಲ್ಲಿ ವಿದ್ಯಾರ್ಥಿ ತಂಡವು ಕಲೋತ್ಸವದ ಸ್ಪರ್ಧೆಗೆ ಹಲವು ದಿನಗಳಿಂದ ತಯಾರಿ ನಡೆಸಿತ್ತು.ಒಟ್ಟು ನಾಲ್ಕು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದುವು.ದ್ವಿತೀಯ ಸ್ಥಾನವನ್ನು ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ಹಾಗೂ ತೃತೀಯ ಸ್ಥಾನವನ್ನು ನಾಲಂದ ಕಾಲೇಜು ಪೆರ್ಲ ಪಡೆದುಕೊಂಡಿತು.