ಮುಳ್ಳೇರಿಯ: ನಾರಂಪಾಡಿ ಶ್ರೀಉಮಾಮಹೇಶ|ವರ ಸನ್ನಿಧಿಯಲ್ಲಿ ಶಿವರಾತ್ರಿಯ ಪ್ರಯುಕ್ತ ವಿದುಷಿಃ ವಾಣಿಶ್ರೀ ಕಬೆಕ್ಕೋಡು ಇವರ ಶಿಷ್ಯವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಪ್ರದ್ಯುಮ್ನ ಶರ್ಮ ಉಪ್ಪಂಗಳ, ಧೃತಿ ಕೊರೆಕ್ಕಾನ, ವೈಭವಿ, ಪ್ರಜ್ಞಾ, ಆಶ್ಲೇಷ್ ಹಾಡುಗಾರಿಕೆ ನಡೆಸಿದರು. ವಿಜೇತ ಸುಬ್ರಹ್ಮಣ್ಯ(ವಯೋಲಿನ್), ವೆಂಕಟ ಯಶಸ್ವಿ ಕಬೆಕ್ಕೋಡು (ಮೃದಂಗ) ದಲ್ಲಿ ಸಹಕರಿಸಿದರು.