ಕಾಸರಗೋಡು: ಜಿಲ್ಲಾಡಳಿತ ಮತ್ತು ಕಾಞಂಗಾಡು ನಗರಸಭೆ ವತಿಯಿಂದ ಕಾಞಂಗಾಡು ಕಡಪ್ಪುರದಿಂದ ಆರಂಭಿಸಿ ಮರಕ್ಕಾಪು ಕಡಪ್ಪುರ ವರೆಗಿನ ಸುಮಾರು ಎರಡು ಕಿ.ಮೀ ಕರಾವಳಿಯನ್ನು ಶುಚೀಕರಿಸುವ ಕಾರ್ಯ ಯಶಸ್ವಿಯಾಗಿ ನೆರವೇರಿತು.
ಶಾಸಕ ಇ. ಚಂದ್ರಶೇಖರನ್ ಉದ್ಘಾಟಿಸಿದರು. ಅಪರ ಜಿಲ್ಲಾಧಿಕಾರಿ ಡಿ.ಆರ್. ಮೇಘಶ್ರೀ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಅಧ್ಯಕ್ಷೆ ಕೆ.ವಿ ಸುಜಾತಾ, ಸತೀಶನ್ ಮಡಿಕೈ, ನಗರಸಭಾ ಸದಸ್ಯ ಕೆ.ಕೆ ಜಾಫರ್, ಅನಿಲ್ ಕುಮಾರ್, ಸಿ.ಎಚ್. ಸುಬೈದಾ, ಐಎಂಎ ಕಾಞಂಗಾಡು ಶಾಖಾ ಅಧ್ಯಕ್ಷ ಟಿ.ವಿ ಪದ್ಮನಾಭನ್ ಮುಂತದವರು ಉಪಸ್ಥಿತರಿದ್ದರು.
ಶುಚೀಕರಣ ಕಾರ್ಯದಲ್ಲಿ ವಿವಿಧ ಶಾಲೆಗಳ ಎನ್ನೆಸ್ಸೆಸ್ ಘಟಕದ ವಿದ್ಯಾರ್ಥಿಗಳು, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಐ.ಎಂ.ಎ, ಕಾಞಂಗಾಡು ಕರಾವಳಿ ಪ್ರದೇಶದ ಕುಟುಂಬಶ್ರೀ ಸದಸ್ಯರು ಸೇರಿದಂತೆ ನಾನಾ ಸಂಘಟನೆಗಳ ಕಾರ್ಯಕರ್ತರು ಶುಚೀಕರಣ ಕಾರ್ಯದಲ್ಲಿ ಪಾಲ್ಗೊಂಡರು. ಕೆಲವೇ ತಾಸುಗಳಲ್ಲಿ ನೂರಾರು ಮಂದಿ ಕಾರ್ಯಕರ್ತರು ಎರಡು ಕಿ,ಮೀ ಕರಾವಳಿಯನ್ನು ಶುಚಿಗೊಳಿಸಿ, ಲಭ್ಯವಾದ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ಬೇರ್ಪಡಿಸಿ ಹಸಿರು ಕ್ರಿಯಾ ಸೇನೆಗೆ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾದರು.