ನವದೆಹಲಿ: ವಿಶ್ವದ ಒಟ್ಟಾರೆ ಶುದ್ಧ ನೀರಿನ ಪೈಕಿ ಶೇ 4ರಷ್ಟು ನೀರು ಹೊಂದಿರುವ ಭಾರತವು ಜಾಗತಿಕ ಜನಸಂಖ್ಯೆಯ ಶೇ 16ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಹೀಗಾಗಿ ಭಾರತವು ಶುದ್ಧ ನೀರಿನ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಪರಿಸರ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ವಿಶ್ವ ಜಲ ದಿನದ ಪ್ರಯುಕ್ತ ಮಾತನಾಡಿದ ಇಂಟಿಗ್ರೇಟೆಡ್ ಹೆಲ್ತ್ ಅಂಡ್ ವೆಲ್‌ಬೀಯಿಂಗ್ ಕೌನ್ಸಿಲ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕಮಲ್ ನಾರಾಯಣ್ ಒಮರ್ ಅವರು, 'ನಲ್ಲಿ ನೀರು ಪೂರ್ತಿ ಒಣಗುವ ಶೂನ್ಯದ ದಿನ ಆರಂಭವಾಗುವ ಹಾಗೂ ಜನರು ತಮ್ಮ ಪಾಲಿನ ಕುಡಿಯುವ ನೀರಿಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಭೀತಿಯಲ್ಲಿ ನಾವು ಬದುಕುತ್ತಿದ್ದೇವೆ' ಎಂದು ಎಚ್ಚರಿಸಿದರು.
ಹವಾಮಾನ ಬದಲಾವಣೆಯಿಂದಾಗಿ ಪರಿಸರ ಮತ್ತು ಪರಿಸರ ವ್ಯವಸ್ಥೆ ಮೇಲೆ ಭಾರಿ ಪರಿಣಾಮ ಎದುರಾಗಿದ್ದು, ಇದರಿಂದ ನೀರಿನ ಬಿಕ್ಕಟ್ಟು ಎದುರಾಗಿದೆ. ಜತೆಗೆ ಈ ಭೂಮಿ ಮೇಲೆ 220 ಕೋಟಿಗಿಂತ ಹೆಚ್ಚು ಜನರು ಸುರಕ್ಷಿತ ನೀರಿನ ಪೂರೈಕೆಯಿಂದ ವಂಚಿತರಾಗಿದ್ದಾರೆ ಎಂದು ಹೇಳಿದರು.
ನೀರಿನ ಪೂರೈಕೆಯೆಂದರೆ ಆರೋಗ್ಯ, ಶಿಕ್ಷಣ, ಆದಾಯ ಮತ್ತು ಗೌರವದ ಸಂಕೇತವಾಗಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಇದು ಬಹುಮುಖ್ಯ. ಆದರೆ ವಿಶ್ವದ ಒಟ್ಟಾರೆ ಜನಸಂಖ್ಯೆ ಪೈಕಿ ಶೇ 16ರಷ್ಟು ಜನರನ್ನು ಹೊಂದಿರುವ ಭಾರತವು ವಿಶ್ವದ ಶುದ್ಧ ನೀರಿನ ಪೈಕಿ ಶೇ 4ರಷ್ಟು ಮಾತ್ರ ಹೊಂದಿದೆ. ಹೀಗಾಗಿ ಭಾರತವು ಶುದ್ಧ ನೀರಿನ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ.