HEALTH TIPS

ಇನ್ಮುಂದೆ ವಾಹನಗಳಿಗೆ ಫಿಟ್​ನೆಸ್​ ಸರ್ಟಿಫಿಕೆಟ್​ ಕಡ್ಡಾಯ: ಕರಡು ಅಧಿಸೂಚನೆಯ ಫುಲ್​ ಡಿಟೇಲ್ಸ್​ ಇಲ್ಲಿದೆ.

            ನವದೆಹಲಿ: ವಾಹನಗಳ ಫಿಟ್‌ನೆಸ್ ಪ್ರಮಾಣಪತ್ರದ ವ್ಯಾಲಿಡಿಟಿ ಮತ್ತು ಮೋಟಾರು ವಾಹನದ ನೋಂದಣಿ ಚಿಹ್ನೆಯನ್ನು ಇನ್ನುಮುಂದೆ ವಾಹನಗಳ ಮೇಲೆ ಪ್ರದರ್ಶಿಸಬೇಕಾಗುತ್ತದೆ. ಇದಕ್ಕೆ ಕಾರಣ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕರಡು ಅಧಿಸೂಚನೆಯನ್ನು ಹೊರಡಿಸಿದೆ.

            ಸದ್ಯ ಇದು ಕರಡು ರೂಪದಲ್ಲಿ ಇದ್ದು, ಶೀಘ್ರವೇ ನಿಯಮವಾಗಿ ಜಾರಿಗೆ ಬರಲಿದೆ.

ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಪ್ರಕಾರ, ಸುಮಾರು 17 ಲಕ್ಷ ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು 15 ವರ್ಷಗಳಿಗಿಂತ ಹಳೆಯದಾಗಿದ್ದು, ಫಿಟ್​ನೆಸ್ ಪ್ರಮಾಣಪತ್ರವಿಲ್ಲದೆ ಸಂಚರಿಸುತ್ತಿವೆ. ಆದರೆ ಇನ್ನುಮುಂದೆ ಇದು ನಿಯಮ ರೂಪದಲ್ಲಿ ಜಾರಿಗೆ ಬಂದರೆ, ಫಿಟ್​ನೆಸ್​ ಪ್ರಮಾಣಪತ್ರಗಳಿಲ್ಲದ ಹಳೆಯ ವಾಹನಗಳು ರಸ್ತೆಯಲ್ಲಿ ಚಲಿಸಿದರೆ ಅವುಗಳನ್ನು ತಕ್ಷಣವೇ ರದ್ದುಗೊಳಿಸಲಾಗುವುದು.

ಕರಡು ನಿಯಮಗಳಲ್ಲಿ ಸೂಚಿಸಲಾದ ರೀತಿಯಲ್ಲಿ ಭಾರಿ, ಮಧ್ಯಮ ಮತ್ತು ಲಘು ಸರಕುಗಳು ಅಥವಾ ಪ್ರಯಾಣಿಕ ವಾಹನಗಳ ಮೇಲೆ ಅವುಗಳನ್ನು ಪ್ರದರ್ಶಿಸಬೇಕಿದೆ. ವಿಂಡ್​ ಸ್ಕ್ರೀನ್​ನ ಎಡಗಡೆಯ ಮೇಲ್ಭಾಗದ ತುದಿಯಲ್ಲಿ ಇವುಗಳನ್ನು ಪ್ರದರ್ಶಿಸಬೇಕು ಎಂದು ಕರಡು ಅಧಿಸೂಚನೆಯಲ್ಲಿ ಹೇಳಲಾಗಿದೆ. ಆಟೋ-ರಿಕ್ಷಾ, ಇ-ರಿಕ್ಷಾ, ಇ-ಕಾರ್ಟ್ ಮತ್ತು ಕ್ವಾಡ್ರ್‌ಸೈಕಲ್‌ಗಳಲ್ಲಿ ವಿಂಡ್​ ಸ್ಕ್ರೀನ್​ನ ಎಡಭಾಗದ ಮೇಲಿನ ಅಂಚಿನಲ್ಲಿ ಫಿಟ್​ನೆಸ್ ಪ್ಲೇಟ್ ಅಳವಡಿಸಬೇಕು. ಮೋಟಾರು ಸೈಕಲ್‌ಗಾದರೆ ಅದನ್ನು ವಾಹನದ ಎದ್ದು ಕಾಣುವ ಭಾಗದಲ್ಲಿ ಪ್ರದರ್ಶಿಸಬೇಕು.

                                      ಅಧಿಸೂಚನೆಯಲ್ಲಿ ಏನಿದೆ?

            10 ವರ್ಷಕ್ಕಿಂತಲೂ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ ಫಿಟ್​ನೆಸ್​ ಸರ್ಟಿಫಿಕೆಟ್ ಇನ್ನುಮುಂದೆ ಕಡ್ಡಾಯ. ನಂಬರ್ ಪ್ಲೇಟ್​​ ಇರುವ ರೀತಿಯಲ್ಲಿಯೇ ಈ ಫಿಟ್​ನೆಸ್ ಪ್ಲೇಟ್ ಕೂಡ ಇರಲಿದ್ದು, ಅವುಗಳ ಮೇಲೆ ವಾಹನದ ಫಿಟ್​ನೆಸ್ ಮುಕ್ತಾಯಗೊಳ್ಳುವ ದಿನಾಂಕವನ್ನು ನಮೂದಿಸಲಾಗುತ್ತದೆ.

                ಏರಿಯಲ್ ಬೋಲ್ಡ್ ಸ್ಕ್ರಿಪ್ಟ್ ಮಾದರಿಯಲ್ಲಿ ನೀಲಿ ಬಣ್ಣದ ಬ್ಯಾಕ್​ಗ್ರೌಂಡ್​ ಇರುವ ಸ್ಟಿಕರ್ ಮೇಲೆ ಹಳದಿ ಬಣ್ಣದಲ್ಲಿ ಫಿಟ್​ನೆಸ್ ಪ್ಲೇಟ್ ತಯಾರಿಸಲಾಗುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries