ಕುಂಬಳೆ: ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಇದರ ಆಶ್ರಯದಲ್ಲಿ ಹಿರಿಯ ಕೃಷಿಕ ಪೆರ್ಣೆ ಸುಬ್ರಹ್ಮಣ್ಯ ಭಟ್ ಅವರ ಶ್ರೀಶೈಲ ಮನೆಯಲ್ಲಿ ಕಾರ್ಬನ್ ಫೈ`ಬರ್ ದೋಟಿ ಮೂಲಕ ಅಡಿಕೆ ಕೊಯ್ಲು ಮತ್ತು ಔಷಧÀ ಸಿಂಪಡಣೆಯ ತರಬೇತಿ ಶಿಬಿರ ನಡೆಯಿತು.
ಬ್ಯಾಂಕಿನ ಮಾಜಿ ಅಧ್ಯಕ್ಷ, ಪ್ರಗತಿಪರ ಕೃಷಿಕ ಶಿವರಾಮ ಭಟ್ ಎಚ್. ಅವರು ಬೆಳಗ್ಗೆ ನಡೆದ ಸಭಾ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ, ನುರಿತ ಕೆಲಸಗಾರರ ಕೊರತೆಯಿಂದ ಅಡಿಕೆ ಕೃಷಿಕರು ಸಂಕಷ್ಟವನ್ನು ಅನುಭವಿಸುತ್ತಿರುವ ಕಾಲದಲ್ಲಿ ನೂತನ ಆವಿಷ್ಕಾರಗಳು ಕೃಷಿಕರಿಗೆ ನೆರವಾಗಲು ಸಾಧ್ಯವಿದೆ. ಔಷಧ ಸಿಂಪಡಣೆ ಕಾಲಕಾಲಕ್ಕೆ ಆಗಬೇಕಾದ ಅನಿವಾರ್ಯತೆ ಇದೆ. ಈ ಸಂದಭರ್Àದಲ್ಲಿ ನುರಿತ ಕೆಲಸಗಾರರು ಸಿಗದೇ ಇದ್ದರೂ ನೂತನ ತಂತ್ರಜ್ಞಾನದತ್ತ ಕೃಷಿಕ ಒಲವನ್ನು ತೋರಬೇಕಾಗಿದೆ ಎಂದರು.
ಬ್ಯಾಂಕಿನ ಅಧ್ಯಕ್ಷ ಜಯಂತ ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಭಟ್ ಪೆರ್ಣೆ, ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ಕೃಷಿ ಅಧಿಕಾರಿ ರವೀಂದ್ರನ್ ಪಾಲ್ಗೊಂಡಿದ್ದರು. ಆರ್.ಜಿ.ಹೆಗಡೆ ಮತ್ತು ರಮೇಶ ಶ್ರೀಪಾದ ಭಟ್ ತರಬೇತುದಾರರಾಗಿ ಸಹಕರಿಸಿದರು. ಸಾಯ ಎಂಟರ್ ಪ್ರೈಸಸ್‍ನ ದೀಪಕ್ ಉಪಸ್ಥಿತರಿದ್ದರು. ಬ್ಯಾಂಕ್ ಉಪಾಧ್ಯಕ್ಷ ಶ್ಯಾಮರಾಜ ಡಿ.ಕೆ. ಸ್ವಾಗತಿಸಿ, ನಿರ್ದೇಶಕ ಶ್ರೀರಾಮ ಭಟ್ ಕಾರಿಂಜ ಹಳೆಮನೆ ಪ್ರಾರ್ಥನೆ ಹಾಡಿದರು. ಬ್ಯಾಂಕ್ ಕಾರ್ಯದರ್ಶಿ ಶ್ರೀಕೃಷ್ಣ ಭಟ್ ವಂದಿಸಿದರು. ಸುಮಾರು 80 ಮಂದಿ ಕೃಷಿಕರು ಶಿಬಿರದಲ್ಲಿ ಪಾಲ್ಗೊಂಡು ಔಷಧ ಸಿಂಪಡಣೆ ಹಾಗೂ ಅಡಿಕೆ ಕೊಯ್ಲು ಕುರಿತಾಗಿ ಮಾಹಿತಿ ಪಡೆದುಕೊಂಡರು.
ಕೇರಳದಲ್ಲಿ ಮೊದಲ ಬಾರಿಗೆ ಇಂತಹ ಒಂದು ಶಿಬಿರವು ನಡೆಯುತ್ತಿದೆ. ಅಡಿಕೆ ಕೃಷಿಕರಿಗೆ ವರದಾನವಾಗುವಂತಹ ಇಂತಹ ಶಿಬಿರಗಳಲ್ಲಿ ಜನರು ಪಾಲ್ಗೊಂಡು ತಮ್ಮ ಕೃಷಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ನಿರುದ್ಯೋಗಿಗಳೂ ಒಂದು ತಂಡವನ್ನು ಕಟ್ಟಿ ಅಡಿಕೆ ಕೊಯ್ಲು, ಔಷ`À ಸಿಂಪಡಣೆಯನ್ನೂ ಮಾಡಿ ಆದಾಯವನ್ನೂ ಗಳಿಸಬಹುದಾಗಿದೆ.
- ಶಂಕರನಾರಾಯಣ ಭಟ್ ಖಂಡಿಗೆ, ಕ್ಯಾಂಪ್ಕೋ ಉಪಾಧ್ಯಕ್ಷ
ಈ ಪೈಬರ್ ದೋಟಿಯ ಮೂಲಕ ಅಡಿಕೆ ಕೊಯ್ಲು ಹಾಗೂ ಔಷ`À ಸಿಂಪಡಣೆ ಮೊದಲ ಬಾರಿಗೆ ಸ್ವಲ್ಪ ಕಷ್ಟವೆಂದು ಕಂಡುಬಂದರೂ, ಕ್ರಮೇಣ ಕೆಲಸ ಮಾಡಿದಂತೆ ಅದು ಸುಲಭವಾಗಲಿದೆ. ಪ್ರಾರಂಭದಲ್ಲಿ ಎಚ್ಚರಿಕೆಯಿಂದ ಮುಂದುವರಿಯಬೇಕು.
- ಆರ್.ಜಿ.ಹೆಗಡೆ, ತರಬೇತುದಾರರು