HEALTH TIPS

ತಗ್ಗದ ಅಪಾಯ ಒಮಿಕ್ರಾನ್ ಗುಪ್ತ ತಳಿ ಎಂದ ತಜ್ಞರು

            ನವದೆಹಲಿ: ಬ್ರಿಟನ್​ನಲ್ಲಿ ಕರೊನಾ ವೈರಸ್​ನ ಒಮಿಕ್ರಾನ್ ರೂಪಾಂತರಿಯ ಬಿಎ2 ಉಪ-ತಳಿಯ ಅಪಾಯ ಇನ್ನೂ ಕಳವಳಕಾರಿ ಮಟ್ಟದಲ್ಲಿದೆ ಎಂದು ಅಧ್ಯಯನವೊಂದು ದೃಢಪಡಿಸಿದೆ ಎಂದು ಗುರುವಾರ ಪ್ರಕಟವಾದ ವರದಿಗಳು ತಿಳಿಸಿವೆ.

           ಇತರ ರೂಪಾಂತರಿಗಳಿಂದ ಸುಲಭವಾಗಿ ಗುರುತಿಸಲು ಸಾಧ್ಯವಾಗುವಂಥ ಕೆಲವು ಜೈವಿಕ ಬದಲಾವಣೆಗಳು ಈ ಪ್ರಭೇದದಲ್ಲಿ ಇಲ್ಲದಿರುವುದರಿಂದ ತಜ್ಞರು ಇದನ್ನು 'ಗುಪ್ತ ತಳಿ' ಎಂದು ವರ್ಣಿಸಿದ್ದಾರೆ.

             ಇಂಪೀರಿಯಲ್ ಕಾಲೇಜ್ ಲಂಡನ್ ಮತ್ತು ಇಪ್ಸೋಸ್ ಎಂಒಆರ್​ಐ ನಡೆಸಿದ ವಿಶ್ಲೇಷಣೆಯಿಂದ 'ಗುಪ್ತ ತಳಿ'ಯ ಅಪಾಯ ಬೆಳಕಿಗೆ ಬಂದಿದೆ. ಫೆಬ್ರವರಿ 8ರಿಂದ ಮಾರ್ಚ್ 1ರ ನಡುವೆ ಸಂಗ್ರಹಿಸಿದ ಸುಮಾರು 95,000 ಸ್ವಾಬ್ ಪರೀಕ್ಷೆಯ ಆಧಾರದಲ್ಲಿ ಈ ಅಂಶ ದೃಢಪಟ್ಟಿದೆ.

4,184 ಕರೊನಾ ಕೇಸ್, 104 ಸಾವು:

             ಭಾರತದಲ್ಲಿ ಗುರುವಾರ ಕರೊನಾ ಸೋಂಕಿನ 4,184 ಹೊಸ ಕೇಸ್​ಗಳು ದೃಢಪಟ್ಟಿವೆ. 104 ರೋಗಿಗಳು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸಾವಿನ ಸಂಖ್ಯೆ 5,15,459ಕ್ಕೆ ಏರಿದೆ. ಕಳೆದ ಒಂದು ದಿನದಲ್ಲಿ 6,554 ಜನರು ಗುಣಮುಖರಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 44,488ಕ್ಕೆ ಇಳಿದಿದೆ ಎಂದು ಸರ್ಕಾರ ಹೇಳಿದೆ.

             ದೆಹಲಿಯಲ್ಲಿ ಗುರುವಾರ 208 ಹೊಸ ಪ್ರಕರಣಗಳು ವರದಿಯಾಗಿದ್ದು ಸೋಂಕಿತರ ಒಟ್ಟು ಸಂಖ್ಯೆ 18,62,255ಕ್ಕೆ ಏರಿದೆ. ಒಬ್ಬರ ಸಾವಿನೊಂದಿಗೆ ರಾಜಧಾನಿಯಲ್ಲಿ ಬಲಿಯಾದವರ ಸಂಖ್ಯೆ 26,140ಕ್ಕೆ ಏರಿದೆ. ದೇಶದಲ್ಲಿ ಮಾರ್ಚ್ 9ರವರೆಗೆ 77,60,82,445 ಸ್ಯಾಂಪಲ್​ಗಳ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries